ಬಂಟ್ವಾಳ: ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಾರ್ಯಾಲಯ ದ.ಕ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಮತ್ತು ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮಶಾಲೆ ಬಂಟ್ವಾಳ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ೧೪ ಮತ್ತು ೧೭ ರ ವಯೋಮಾನದ ಬಾಲಕ, ಬಾಲಕಿಯರ ಟೇಬಲ್ ಟೆನ್ನೀಸ್ ಪಂದ್ಯಾಟವು ಶ್ರೀ ವೆಂಕಟರಮಣ ಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಉದ್ಯಮಿ ರೋ. ಮಂಜುನಾಥ್ ಆಚಾರ್ಯ ಪಂದ್ಯಾಟವನ್ನು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದಪ್ಪ ಎಲ್.ಬಿ ಅವರು ಮಾತನಾಡಿ, ಮಕ್ಕಳ ಸರ್ವೋತ್ತಮ ಬೆಳವಣಿಗೆಗೆ ಶಾರೀರಿಕ ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತಿದೆ. ಕಲಿಕೆಯೊಂದಿಗೆ ಕ್ರೀಡೆಯು ಅತೀ ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಮೊಕ್ತೇಸರರು,ಶಾಲಾ ಸಂಚಾಲಕರಾದ ಬಿ. ಸುರೇಶ್ ವಿ. ಬಾಳಿಗಾ ಅವರು ವಹಿಸಿದ್ದರು. ಸುಮಾರು ೨೮ ತಂಡಗಳು ೪ ವಿಭಾಗದಲ್ಲಿ ಭಾಗವಹಿಸಿದರು.
ವಿಜೇತರು
ಪಂದ್ಯಾಟದಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಪ್ರಥಮ, ಸೈಂಟ್ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆ ಪುತ್ತೂರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಪ್ರಥಮ ಹಾಗೂ ಸೈಂಟ್ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಕೊಡಿಯಾಲ್ ಬೈಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪ್ರೌಢಶಾಲಾ ಬಾಲಕರಲ್ಲಿ ಪ್ರಥಮ ಸ್ಥಾನವನ್ನು ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಹಾಗೂ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆ ಕುಲಶೇಖರ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಪ್ರೌಢಶಾಲಾ ಬಾಲಕಿಯರಲ್ಲಿ ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲಮಾಧ್ಯಮ ಶಾಲೆ ಪ್ರಥಮ ಸ್ಥಾನವನ್ನು , ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆ ಧರ್ಮಸ್ಥಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.
ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಷ್ಣುನಾರಾಯಣ್ ಹೆಬ್ಬಾರ್ , ಬಿ.ಆರ್. ಸಿ ವಿದ್ಯಾ, ಶಿಕ್ಷಣ ಸಂಯೋಜಕ ರಮಾನಂದ್, ಆಡಳಿತ ಮಂಡಳಿಯ ಸದಸ್ಯರಾದ ಶಿವಾನಂದ ಬಾಳಿಗಾ, ವೆಂಕಟರಮಣ ಶೆಣೈ, ಲಕ್ಷ್ಮಣ್ ಶೆಣೈ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ಆಳ್ವ, ಮುಖ್ಯೋಪಾಧ್ಯಾಯಿನಿ ರೋಷನಿ ತಾರಾ ಡಿ’ಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ , ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವೇದಾವತಿ, ಸಂಘದ ಪದಾಧಿಕಾರಿಗಳಾದ ಜಗದೀಶ್ ರೈ, ಶಿವಪ್ರಸಾದ ಶೆಟ್ಟಿ,, ಜಯರಾಮ, ನವೀನ್ ಪಿ.ಎಸ್, ಚಿನ್ನಪ್ಪ ಉಪಸ್ಥಿತರಿದ್ದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷೆ ಚಿತ್ರಾ ಯಡಪಡಿತ್ತಾಯ, ಬಂಟ್ವಾಳ ಲಯನ್ಸ್ ಕ್ಲಬ್ ಕೋಶಾಧಿಕಾರಿ ಸುಮಾ ಸುನೀಲ್ ಇವರು ವಿಜೇತರಿಗೆ ಬಹುಮಾನ ವಿತರಿಸಿದರು.
ದೈಹಿಕ ಶಿಕ್ಷಣ ಶಿಕ್ಷಕ ಎಂ.ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಧಿಕಾರಿಯಾದ ಆಶಾ ನಾಯಕ್ ವಂದಿಸಿದರು. ಶಿಕ್ಷಕ ಮುರಳೀಧರ ಆಚಾರ್ಯ ನಿರೂಪಿಸಿದರು.
