ಬಂಟ್ವಾಳ: ಪಾಣೆಮಂಗಳೂರು ಸಮೀಪದ ರಂಗೇಲು ಅಂಗನವಾಡಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಚರಿಸಲಾಯಿತು.
ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಜ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
 ಈ ಸಂದರ್ಭ ಡಾ.ಜಯಮಾಲ ಮಾತನಾಡಿ ಈ ವರ್ಷದ ಧ್ಯೇಯವಾಕ್ಯ “ಸುಸ್ಥಿರ ಜೀವನದ ಆರಂಭಕ್ಕಾಗಿ ಸ್ತನ್ಯಪಾನ ಬಲಪಡಿಸುವ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡೋಣ” ಎಂದರು.
 
ಡಾ.ಪ್ರಜ್ಞಾರವರು ಸ್ತನ್ಯಪಾನದ ಮಹತ್ವ ಹಾಗೂ ಡಾ.ಕನಿಷ್ಕಾ, ಡಾ.ತೇಜಸ್ವಿನಿ ಹಾಗೂ ಡಾ.ಪೂಜಿತಾ ಸ್ತನ್ಯಪಾನದ ವಿವಿಧ ತೊಂದರೆಗಳು, ಮಗುವಿನ ಪೂರಕ ಆಹಾರ ಇತ್ಯಾದಿಗಳ ಬಗ್ಗೆ ಪ್ರಾತಿಕ್ಷಿಕೆಯ ಮೂಲಕ ಮಾಹಿತಿ ನೀಡಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ರಕ್ಷಿತಾ,ರಂಗೇಲು ಅಂಗನವಾಡಿ ಸಮಿತಿ ಅಧ್ಯಕ್ಷರಾದ ಮೋನಪ್ಪ ಪೂಜಾರಿ, ಕಾರ್ಯದರ್ಶಿ ಶಬೀರ್, ಎ.ಜೆ ಗ್ರಾಮೀಣ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ವಾಮನ್ ನಾಯಕ್,  ಜೂನಿಯರ್ ರೆಸಿಡೆಂಟ್ ಡಾ.ಅಕ್ಷಯ್ ರಾಜ್, ಆಶಾ ಕಾರ್ಯಕರ್ತೆಯಾದ ಜ್ಯೋತಿಲಕ್ಷ್ಮೀ ಉಪಸ್ಥಿತಿಯಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಮೇಲ್ವಿಚಾರಕಿ  ಮುಬಿದಾಬಾನು ಧನ್ಯವಾದ ವಂದಿಸಿದರು.
ಅಂಗನವಾಡಿ ಕಾರ್ಯಕರ್ತೆ  ಬಬಿತಾ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *