ಬಂಟ್ವಾಳ:ಯಾವುದೇ ಬೇಧ ಭಾವವಿಲ್ಲದೆ ಸಮಾಜದ ಪ್ರತಿಯೊಬ್ಬರಿಗೂ ಅವರರವರ ಅರೋಗ್ಯ ಸಮಸ್ಯೆಗಳಿಗೆ ಸ್ಪಂದಿಸಿ ಅರೋಗ್ಯಪೂರ್ಣ ಸೇವೆ ಸಲ್ಲಿಸುವುದರೊಂದಿಗೆ ವೈದ್ಯರು ತಮ್ಮ ಬದುಕಿನಲ್ಲಿ ಸಾರ್ಥಕತೆ ಕಾಣುತ್ತಿರುವುದು ವೈದ್ಯ ವೃತ್ತಿಯಿಂದ ಸಾಧ್ಯವಾಗಿದೆ ಎಂದು ಸಿದ್ದಕಟ್ಟೆಯ ಖ್ಯಾತ ವೈದ್ಯ ರೋ.ಡಾ ಸುದೀಪ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತವಾಗಿ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಬಂಟ್ವಾಳ ಇದರ ವತಿಯಿಂದ  ನಡೆದ ಗೌರವರ್ಪಣೆಯನ್ನು ಸ್ವೀಕರಿಸಿ ಅವರು‌ ಮಾತನಾಡಿದರು.
ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್   ಇನ್ನೂ ಹತ್ತು ಹಲವು ಜನಪರವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರೋಟರಿ ಜಿಲ್ಲೆಯಲ್ಲಿಯೇ ಮಾದರಿ ಕ್ಲಬ್ ಆಗಿ ಮೂಡಿ ಬರಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಲೋರೆಟ್ಟೋ ಹಿಲ್ಸ್ ಅಧ್ಯಕ್ಷೆ ರೋ ಗೀತಾ ಬಲ್ಲಾಳ್ ಮಾತನಾಡಿ, ವಿಶ್ವ ವೈದ್ಯರ ದಿನಾಚರಣೆಯ ಪ್ರಯುಕ್ತ  ವೈದ್ಯರನ್ನು ಗೌರವಿಸುವುದು ಹೆಮ್ಮೆಯಾಗುತ್ತಿದೆ.  ಈ ನಿಟ್ಟಿನಲ್ಲಿ ವೈದ್ಯರ ಸೇವೆಗೆ ನಾವೆಲ್ಲರೂ ಚಿರಋಣಿಯಾಗಿದ್ದೇವೆ ಎಂದರು.
ರೋಟರಿ ಕ್ಲಬ್ ಸದಸ್ಯರಾದ ರಾಜೇಶ್ ಶೆಟ್ಟಿ ರಾಯಿ ಶೀತಲಾ, ಸುಮಿತ್ರಾ ರಾಮಚಂದ್ರ ಶೆಟ್ಟಿಗಾರ್, ಪ್ರಭಾಕರ ಪ್ರಭು, ರಾಜೇಶ್ ಶೆಟ್ಟಿ ಕೊನೆರಬೆಟ್ಟು ಉಪಸ್ಥಿತರಿದ್ದರು.
ರೋ ರಮೇಶ್ ನಾಯಕ್ ರಾಯಿ ಸ್ವಾಗತಿಸಿ ,ವಂದಿಸಿದರು. 

By Suddi9

Leave a Reply

Your email address will not be published. Required fields are marked *