ಬಂಟ್ವಾಳ: ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕು ಆಶಾ ಕಾರ್ಯಕರ್ತೆಯರ ಮಜ್ದೂರ್ ಸಂಘ, ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಹಾಗೂ ಬೀಡಿ ಮಜ್ದೂರ್ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಬಿ.ಸಿ.ರೋಡ್‌ನ ಶಿಶು ಮಂದಿರದಲ್ಲಿ ನಡೆಸಲಾಯಿತು.

ಮುಖ್ಯ ಅತಿಥಿಯಾಗಿಭಾಗವಹಿಸಿದ್ದ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅವರು ಮಾತನಾಡಿ, 1955ರಲ್ಲಿ ಪೂಜ್ಯ ದತ್ತೋಪಂತ್ ಬಾಪುರಾವ್ ಥೇಂಗಡಿಯವರು ಭಾರತೀಯ ಮಜ್ದೂರ್ ಸಂಘವನ್ನು ಸ್ಥಾಪಿಸಿದ ಹಿನ್ನೆಲೆ, ಸಂಘಟನೆಯ ಉಗಮ, ಕಾರ್ಮಿಕ ಚಳವಳಿಯಲ್ಲಿ ಅದರ ಪಾತ್ರ, ಸಾಧನೆಗಳು ಹಾಗೂ ಮುಂದಿನ ದಿನಗಳಲ್ಲಿ ಹೊಸ ಕ್ಷೇತ್ರಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ಅತಿಥಿಯಾಗಿದ್ದ ದ.ಕ ಜಿಲ್ಲಾ ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ್ ಕೊಟ್ಟಾರಿ ಮಾತನಾಡಿ, ಭಾರತೀಯ ಮಜ್ದೂರ್ ಸಂಘದ ಕಾರ್ಯಕರ್ತರು ಸಂಸ್ಕಾರಯುತ ಹಾಗೂ ಮೌಲ್ಯಾಧಾರಿತ ಜೀವನ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಭಾರತೀಯ ಮಜ್ದೂರ್ ಸಂಘದ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು. ಅವರು, ಜಿಲ್ಲೆಯ ಸಂಘಟನೆಯ ಬೆಳವಣಿಗೆ, ವಿವಿಧ ಯೂನಿಯನ್‌ಗಳ ವಿಸ್ತರಣೆ ಹಾಗೂ ಮುಂದಿನ ದಿನಗಳ ಸಂಘಟನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಬಿಎಂಎಸ್ ಉಪಾಧ್ಯಕ್ಷೆ ಗೀತಾ ಧರ್ಮರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಕಾನೂನು ಸಲಹೆಗಾರರು,ಹಿರಿಯ ನ್ಯಾಯವಾದಿ ಜಯರಾಮ್ ರೈ, ಬಿಎಂಎಸ್ ಉಪಾಧ್ಯಕ್ಷನಾರಾಯಣ ಪೂಜಾರಿ, ಆಶಾ ಕಾರ್ಯಕರ್ತೆಯರ ಬಂಟ್ವಾಳ ತಾ. ಅಧ್ಯಕ್ಷೆ ತುಳಸಿ ದೇವರಾಜ್,ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ ಬಂಟ್ವಾಳ ತಾ. ಅಧ್ಯಕ್ಷ ಶ್ರೀಕಾಂತ್,
ವಿವಿಧ ಸಂಯೋಜಿತ ಸಂಘಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶ್ರಮಿಕರು ಉಪಸ್ಥಿತರಿದ್ದರು.
ಇದಕ್ಕು ಮುನ್ನ
ಭಾರತ ಮಾತೆ, ವಿಶ್ವಕರ್ಮ ಭಗವಾನ್ ಹಾಗೂ ಪೂಜ್ಯ ದತ್ತೋಪಂತ್ ಬಾಪುರಾವ್ ಥೇಂಗಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆನೀಡಲಾಯಿತು.
ಬೀಡಿ ಮಜ್ದೂರ್ ಸಂಘ ಜಿಲ್ಲಾ ಕಾರ್ಯದರ್ಶಿ
ನಳಿನಿ ಅಡ್ಯಾರು ಶ್ರಮಿಕ ಗೀತೆ ಹಾಡಿದರು. ಕಾರ್ಯದರ್ಶಿ ವಸಂತ ಕುಮಾರ್ ಮಣಿಹಳ್ಳ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಸಂಘದ ಬಂಟ್ವಾಳ ತಾಲೂಕು ಕಾರ್ಯದರ್ಶಿ ಲೀಲಾಕ್ಷೀ ವಂದಿಸಿದರು. ಉಮಾಶಂಕರ್ ಕಾರ್ಯಕ್ರಮ ನಿರೂಪಿಸಿದರು.
