ಬಂಟ್ವಾಳ: ಬಿ.ಸಿ.ರೋಡ್ ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣದಲ್ಲಿ ಜು.16 ರಂದು ಕೊಲೆಯಾದ ತಾಲೂಕಿನ ಕಕ್ಕೆಪದವಿನ ಕು. ಲಾವಣ್ಯಳ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿ ಚೇತನ್ ಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಹಾಗೂ ಮುಂದಿನ ದಿನದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಕ್ಕೆಪದವು ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ನಿಯೋಗ ಬಂಟ್ವಾಳ ಉಪವಿಭಾಗದ ಎಎಸ್ಪಿಯವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಯುವತಿ ಲಾವಣ್ಯಳ ಕೊಲೆ ಪ್ರಕರಣ ಇಡೀ ಸಮಾಜಕ್ಕೆ ಒಂದು ಆಘಾತಕಾರಿ ಘಟನೆಯಾಗಿದೆ. ಜೀವನ ನಿರ್ವಹಣೆಗಾಗಿ ಕೆಲಸಕ್ಕಾಗಿ ಬರುವ ಹೆಣ್ಮಕ್ಕಳಿಗೆ ಸುರಕ್ಷತೆ ಇಲ್ಲ ಎಂಬುದಕ್ಕೆ ಈ ಘಟನೆ ತಾಜಾ ನಿದರ್ಶನವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕು. ಲಾವಣ್ಯಳ ಕೊಲೆಯನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆಯಲ್ಲದೆ.ಆರೋಪಿ ಚೇತನ್ ಗೆ ಕಠಿಣ ಶಿಕ್ಷೆಯಾಗುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಪ್ರಕರಣದ ತನಿಖೆಯನ್ನು ಪ್ರಾಮಾಣಿಕ ಮತ್ತು ದಕ್ಷತೆಯಿಂದ ನಡೆಸಬೇಕೆಂದು ನಿಯೋಗ ಈ ಸಂದರ್ಭ ಅಗ್ರಹಿಸಿದೆ.
ಈ ಪಾತಕಿಗೆ ಸೂಕ್ತ ಶಿಕ್ಷೆಯಾಗದಿದ್ದಲ್ಲಿ ಕಾನೂನು ಹಾಗೂ ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇಲ್ಲದಂತಾಗುತ್ತದೆ. ಲಾವಣ್ಯಳನ್ನು ಕಳಕೊಂಡ ಹೆತ್ತವರಿಗೆ ಮತ್ತು ಕುಟುಂಬಕ್ಜೆ ನ್ಯಾಯ ಒದಗಿಸುವ ದೆಸೆಯಲ್ಲಿ ಪ್ರಕರಣವನ್ನು ಪಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ತನಿಖೆಗೆ ಗುರಿಪಡಿಸಿಆದಷ್ಟು ಶೀಘ್ರ ಆರೋಪಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.ಸಂಘದಅಧ್ಯಕ್ಷರಾದ ರಾಜೀವ್ ಕಕ್ಕೆಪದವು,
ಗೌರವಾಧ್ಯಕ್ಷರಾದ ಅನ್ನು ಖಂಡಿಗ ಉಪಾಧ್ಯಕ್ಷರಾದ ಅಣ್ಣಿ ಕುರುವರ ಗೋಳಿ, ಸಂಪತ್ ಮಾಡೋಡಿ,ಕಾರ್ಯದರ್ಶಿ ಜನಾರ್ಧನ, ಪ್ರಮುಖರಾದ ಡಾ.ರುಕ್ಮಯ ಮಾಡೋಡಿ,ಶಂಕರ್ ಕೇರ್ಯ, ಸತೀಶ್ ಕಕ್ಕೆಪದವು,ಗೋಪಾಲ, ಪ್ರಸಾದ್, ಕಿನ್ನಿಗ, ರವಿ ಖಂಡಿಗ ಮೊದಲಾದವರಿದ್ದರು.
