ಬಂಟ್ವಾಳ: ಫಸ್ಟ್ ರನ್ನರ್ ಆಪ್ ಜೋಡಿ ನಂ..೧ ಖ್ಯಾತಿಯ ಪ್ರಜ್ಞಾ ಮತ್ತು ಧನರಾಜ್ ದಂಪತಿ ಮಂಗಳವಾರ ಮೆಲ್ಕಾರ್ ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆದ ಸಂಧ್ಯಾ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಯುವ ಸಮುದಾಯ ಇಂತಹ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚು,ಹೆಚ್ಚು ಭಾಗವಹಿಸಬೇಕು ಎಂದು ಹೇಳಿದರು. ಪ್ರಕೃತಿಯ ಹಚ್ಚ ಹಸಿರಿನ ಮಡಿಲಿನಲ್ಲಿರುವ ನರಹರಿ ಪರ್ವತದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅವರು ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಧನರಾಜ್ ದಂಪತಿಯನ್ನು ಆಡಳಿತ ಮೋಕ್ತೆಸರರಾದ ಡಾ.ಪ್ರಶಾಂತ್ ಮೂರ್ಲ ಅವರು ಸನ್ಮಾನಿಸಿದರು. ಧನರಾಜ್‌ರವರ ಮಾತಾಶ್ರೀ ಸೌಮ್ಯ ರಾಘವೇಂದ್ರ ರವರು ಉಪಸ್ಥಿತರಿದ್ದರು.
ಮೋಕ್ತೆಸರರಾದ ಪ್ರತಿಭಾ ಎ.ರೈ,ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಆತ್ಮರಂಜನ್ ರೈ, ಅರ್ಚಕರಾದ ಪರಮೇಶ್ವರ ಮಯ್ಯ, ಉದಯ ಭಟ್, ಮ್ಯಾನೇಜರ್ ಆನಂದ್, ಸದಾಶಿವ ಸನಿಲ್, ಭಜನೆ ಸಂಯೋಜಕರಾದ ಶಂಕರ ಆಚಾರ್ಯ, ಓಂ ಪ್ರಕಾಶ್ ಆಚಾರ್ಯ, ಭಜನ ತಂಡದ ಮೋಹನ್, ವಿಘ್ನೇಶ್, ಮಿಥುನ್, ನಾಗೇಶ್ ಮತ್ತು ಎಂ.ಎನ್ ಕುಮಾರ್ ಉಪಸ್ಥಿತರಿದ್ದರು.
ಬಳಿಕ ಗೋಳ್ತಮಜಲು ಗಣೇಶ ನಗರ ಗಣೇಶ ಮಂದಿರದ ವತಿಯಿಂದ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಿತು.
