ಬಂಟ್ವಾಳ: ತೆಂಗು ಮತ್ತು ಅಡಿಕೆ ಬೆಳೆಯ ಸಮಗ್ರ ರೋಗ ನಿರ್ವಹಣೆ ಮಾಹಿತಿ ಕಾರ್ಯಕ್ರಮ ಬಿ .ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ನಡೆಯಿತು. ಬಂಟ್ವಾಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೊ. ಪ್ರದೀಪ್ ಡಿಸೋಜ ಸಂಪನ್ಮೂಲ ವ್ಯಕ್ತಿಯಾಗಿ ಸಮಗ್ರ ಮಾಹಿತಿ ವಿವರಿಸಿದರಲ್ಲದೆ ಇಲಾಖೆಯಿಂದ ಸಿಗುವ ವಿವಿಧ ಸವಲತ್ತುಗಳು, ಕೃಷಿ ಯಂತ್ರೋಪಕರಣಗಳ ಸಹಾಯಧನ ಮಾಹಿತಿ ನೀಡಿದರು.

ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ ಬಂಟ್ವಾಳ ಅಧ್ಯಕ್ಷ ರಾಜಾ ಬಂಟ್ವಾಳ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ಶಶಿಕಲ ಕೃಷ್ಣ ಭಂಡಾರಿ, ಡಾ. ರಜತ್, ವಿಠಲ ಸಪಲ್ಯ, ಸದಾಶಿವ ಬಂಗುಲೆ, ನಾಗೇಶ್ ಪೂಜಾರಿ ಕಲ್ಯಾರ್ ಉಪಸ್ಥಿತರಿದ್ದರು.
ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೈಲು ಮೊದಲಾದ ಹಿರಿಯ ಸಹಕಾರಿಗಳು ಭಾಗವಹಿಸಿದ್ದರು.
ತೆಂಗು ಸೌಹಾರ್ಧ ಸಹಕಾರಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರ್ಷಿತ್ ಕುಮಾರ್ ವರದಿ ವಾಚಿಸಿದರು.ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
