ಬಂಟ್ವಾಳ: ಇರ್ವತ್ತೂರು ಗ್ರಾಮ ಪಂಚಾಯತ್ ಗ್ರಂಥಾಲಯ ಕಟ್ಟಡದಲ್ಲಿ ಮೆಸ್ಕಾಂ ವಗ್ಗ ಶಾಖೆಯ ಪವರ್ ಮ್ಯಾನ್ ಸಂತೋಷ್ ಬಿರಾದರ್ ಮತ್ತು ವಿಆರ್ ಡಬ್ಲ್ಯು ವೆಂಕಟೇಶ್ ಇರ್ವತ್ತೂರು ಅವರು ಸುಮಾರು ಒಂದು ವಾರಗಳ ಕಾಲ ಗೃಹ ಜ್ಯೋತಿ ಫಲಾನುಭವಿಗಳ ಅರ್ಜಿ ಪರಿಶೀಲನಾ ನೋಂದಣಿ ಕಾರ್ಯ ನಡೆಸಿದರು.

ಈ ಸಂದರ್ಭ ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ ಅವರು ಭೇಟಿ ನೀಡಿ ಗ್ರಾಮಸ್ಥರು ಅಗಮಿಸಿ ಗೃಹಜ್ಯೋತಿ ನೋಂದಣಿಯಲ್ಲಿ ಭಾಗವಹಿಸಿ, ಅತೀ ಹೆಚ್ಚು ಅರ್ಜಿ ನೋಂದಾವಣೆಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್, ಬಂಟ್ವಾಳ ಆರೋಗ್ಯ ಸಮಿತಿ ಸದಸ್ಯರಾದ ಪ್ರವೀಣ್ ರೊಡ್ರಿಗಸ್, ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಸುಧೀಂದ್ರ ಶೆಟ್ಟಿ, ಇರ್ವತ್ತೂರು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಗುರುಪ್ರಸಾದ್ ಶೆಟ್ಟಿ, ನಜೀರ್ ಸಾಹೇಬ್, ಸುದರ್ಶನ್ ಇರ್ವತ್ತೂರು ಮತ್ತಿತರರು ಉಪಸ್ಥಿತರಿದ್ದರು.
