ಬಂಟ್ವಾಳ: ಸಜೀಪ ಮಾಗಣೆ ಶ್ರೀ ನಡಿ ಯೇಳು ದೈವಂಗಳು ಶ್ರೀ ಉಳ್ಳಾಲ್ದಿ, ಶ್ರೀ ನಾಲ್ಕೈತಾಯ ದೈವಗಳ ನೂತನ ಆರೂಡ ಮಾಡದಾರುಗುತ್ತು ನೂತನ ತರವಾಡುಮನೆ ಪುನರ್ ನಿರ್ಮಾಣಕ್ಕಾಗಿ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನಡೆಸಲಾಯಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರು ವೈಧಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಬಿಜಂದಾರುಗುತ್ತು ಶಿವರಾಮ ಭಂಡಾರಿ, ಮಾಡದಾರುಗುತ್ತು ಗಡಿ ಪ್ರಧಾನರಾದ ಶಶಿಧರ ರೈ ಯಾನೆ ನಾರಣ ಆಳ್ವ, ಸಜೀಪಗುತ್ತು ಗಡಿ ಪ್ರಧಾನರಾದ ಮುತ್ತಣ್ಣ ಶೆಟ್ಟಿ ಯಾನೆ ಕಾಳ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ ರಾಧಾಕೃಷ್ಣ ಆಳ್ವ, ಯಶೋಧರ ರೈ ,ಸತೀಶ ಶೆಟ್ಟಿ, ಯಶವಂತ ಪೂಜಾರಿ ದೇರಾಜೆಗುತ್ತು, ಶಂಕರ ಪೂಜಾರಿ ಯಾನೆ ಕೋಚು ಪೂಜಾರಿ, ಕುಂಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು
