ಬಂಟ್ವಾಳ : ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆಯಲ್ಲಿ 24 ವರ್ಷದಿಂದ ಸಾಮಾಜಿಕ, ಸಂಸ್ಕೃತಿಕ ಸೇವಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯಾದ” ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ ” (ರಿ) ಕಮ್ಮಾಜೆ ಹಾಗೂ “ನಾಗಶ್ರೀ ಮಾತೃ ವೃಂದ ಕಮ್ಮಾಜೆ”ಇದರ 2025-26ನೇ ಸಾಲಿನ *ವಾರ್ಷಿಕ ಮಹಾಸಭೆಯು ತೆಂಕ ಬೆಳ್ಳೂರು ಧನುಪೂಜೆ ನಾಗಶ್ರೀ ವಿವೇಕ ಭವನದಲ್ಲಿ ನಡೆಯಿತು.
ಸಭೆಯಲ್ಲಿ ಎರಡೂ ಸಂಸ್ಥೆಯ 2026-2027 ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ)ನ ನೂತನ ಅಧ್ಯಕ್ಷರಾಗಿ ಹರೀಶ್ ಮುಡೈಕೋಡಿ ಅವರು ಆಯ್ಕೆಯಾದರೆ,ಪ್ರಧಾನ ಕಾರ್ಯದರ್ಶಿಯಾಗಿ ತಿರುಮಲೇಶ್ ಬೆಳ್ಳೂರು ಆಯ್ಕೆಗೊಂಡರು.

ಉಳಿದಂತೆ ಗೌರವ ಮಾರ್ಗದರ್ಶಕರಾಗಿ ಶ್ರೀ ವಿವೇಕ ಚೈತನ್ಯನಾಂದ ಸ್ವಾಮೀಜಿ ಪೊಳಲಿ ತಪೋವನ,ಗೌರವಾಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಅನಂತ್ ರಾಮ್ ಹೆರಳ್ ,ಉಪಾಧ್ಯಕ್ಷರಾಗಿ ತಿಮ್ಮಪ್ಪ ಕಮ್ಮಾಜೆ ,ಜೊತೆ ಕಾರ್ಯದರ್ಶಿ, ದುರ್ಗಾ ಪ್ರಸಾದ್ ಕಮ್ಮಾಜೆ,ಕೋಶಾಧಿಕಾರಿಯಾಗಿ ತಿರುಲೇಶ್ ಬೆಳ್ಳೂರು ,ಜೊತೆ ಕೋಶಾಧಿಕಾರಿಯಾಗಿ ಲೋಹಿತ್ ಹೆಬ್ಬಾರಬೆಟ್ಟು ,ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಕಮ್ಮಾಜೆ, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಸುಧೀರ್ ತರವು ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ
ರಾಮಚಂದ್ರ ವರಕೋಡಿ, ರಾಮದಾಸ್ ಕಮ್ಮಾಜೆ, ತಿಮ್ಮಪ್ಪ ಕುಲಾಲ್ ಕಮ್ಮಾಜೆ, ಚಂದ್ರಹಾಸ ಅಜಿನಡ್ಕ,ಪದ್ಮನಾಭ ಮಂಗಾಜೆ ಅವರು.ಆಯ್ಕೆಯಾಗಿದ್ದಾರೆ .
“ನಾಗಶ್ರೀ ಮಾತೃ ವೃಂದ ಕಮ್ಮಾಜೆ” ಸಂಸ್ಥೆಯ 2026-27 ನೇ ಸಾಲಿನ ನೂತನಅಧ್ಯಕ್ಷರಾಗಿ ಸೌಮ್ಯ ಕಮ್ಮಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಶೋಭಿತಾ ಕಮ್ಮಾಜೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಲತಾ ಧನುಪೂಜೆ, ಜೊತೆ ಕಾರ್ಯದರ್ಶಿಯಾಗಿ ಭವ್ಯ ಬೆಳ್ಳೂರು, ಕೋಶಾಧಿಕಾರಿಯಾಗಿ ದಿವ್ಯ ಬೆಳ್ಳೂರು, ಕ್ರೀಡಾ ಕಾರ್ಯದರ್ಶಿಯಾಗಿ ನಿಶಾ ಕಮ್ಮಾಜೆ,ಜೊತೆ ಕ್ರೀಡಾ ಕಾರ್ಯದರ್ಶಿ ಹಂಸಿಕಾ ಧನುಪೂಜೆ ಹಾಗು ಸಂಘಟನಾ ಕಾರ್ಯದರ್ಶಿಗಳಾಗಿ ಸುಮಾ ಕಮ್ಮಾಜೆ,ಸಂಧ್ಯಾ ಧನುಪೂಜೆ,ವೇದಾವತಿ ಧನುಪೂಜೆ, ಸುಸ್ಮಿತಾ ಧನುಪೂಜೆ ರಮಿತಾ ಧನುಪೂಜೆ ಅವರು ಆಯ್ಕೆಯಾದರು.
ಸಭೆಯಲ್ಲಿ ಗರವರ್ಷದ ವರದಿವಾಚನ,ಲೆಕ್ಕಪತ್ರ ಮಂಡಿಸಲಾಯಿತು.
