ಬಂಟ್ವಾಳ: ಕರ್ನಾಟಕ ರಾಜ್ಯ ಸರ್ಕಾರಿ ಕಂದಾಯ ಇಲಾಖಾ ನೌಕರರ ಸಂಘ(ರಿ), ಬೆಂಗಳೂರು ಜಿಲ್ಲಾ  ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಕಂದಾಯ ಇಲಾಖೆಯ ವಾರ್ಷಿಕ ಕ್ರೀಡಾಕೂಟ 2026ರಲ್ಲಿ ಬಂಟ್ವಾಳ ತಂಡ ಸಮಗ್ರ ಚಾಂಪಿಯನ್ ಆಗಿ ಮೂಡಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಇಲಾಖೆ ಸಿಬ್ಬಂದಿ ಭಾಗವಹಿಸಿ, ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು

ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜನಾರ್ದನ್ ಜೆ ಮತ್ತು ಅವರ ತಂಡಕ್ಕೆ, ಗ್ರಾಮ ಆಡಳಿತ ಅಧಿಕಾರಿಗಳ ಜಿಲ್ಲಾ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್ ಸಿ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸಹಿತ ಅಪರ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ, ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ, ಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರರು, ಎನ್‌ಐಟಿಕೆ ಸಂಸ್ಥೆಯ ಡೀನ್, ರಾಜ್ಯಾಧ್ಯಕ್ಷರು- ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘ(ರಿ), ತಾಲೂಕು ಮಟ್ಟದ ಕಂದಾಯ ನೌಕರರ ಸಂಘ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕ್ರೀಡಾಕೂಟದ ಫಲಿತಾಂಶ:

ಕ್ರಿಕೆಟ್: ಬಂಟ್ವಾಳ ಪ್ರಥಮ, ಸುಳ್ಯ ದ್ವಿತೀಯ,
ಹಗ್ಗಜಗ್ಗಾಟ (ಪುರುಷರು): ಬಂಟ್ವಾಳ ಪ್ರಥಮ,ಜಿಲ್ಲಾಧಿಕಾರಿಗಳ ಕಚೇರಿ, ಮಂಗಳೂರು ದ್ವಿತೀಯ,
ಹಗ್ಗಜಗ್ಗಾಟ (ಮಹಿಳೆಯರು): ಬಂಟ್ವಾಳ ಪ್ರಥಮ, ಬೆಳ್ತಂಗಡಿ ದ್ವಿತೀಯ,
ಥೋಬಾಲ್ (ಮಹಿಳೆಯರು): ಸುಳ್ಯ ಪ್ರಥಮ, ಕಡಬ ದ್ವಿತೀಯ
ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಪುರುಷರು): ಬಂಟ್ವಾಳ ಪ್ರಥಮ,
ಮಂಗಳೂರು ದ್ವಿತೀಯ,
ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಪುರುಷರು): ಬಂಟ್ವಾಳ ಪ್ರಥಮ, ಮಂಗಳೂರು ದ್ವಿತೀಯ,
ಶಟಲ್ ಬ್ಯಾಡ್ಮಿಂಟನ್ ಡಬಲ್ಸ್ (ಮಹಿಳೆಯರು):
ಜಿಲ್ಲಾಧಿಕಾರಿಗಳ ಕಚೇರಿ, ಮಂಗಳೂರು ಪ್ರಥಮ, ಬೆಳ್ತಂಗಡಿ ಕಡಬ

By Suddi9

Leave a Reply

Your email address will not be published. Required fields are marked *