ಬಂಟ್ವಾಳ: ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಬಿಜೆಪಿ ಏಕಾಂಗಿಯಾಗಿ ಸಂಪೂರ್ಣ ಬಹುಮತದೊಂದಿಗೆ ಆಡಳಿತಕ್ಕೆ ಬಂದಿರುವ ನಿಟ್ಟಿನಲ್ಲಿ ಗೃಹ ಮಂತ್ರಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಪ್ರಧಾನಿ ಮೋದಿಜಿಯವರಿಗೆ ಅಭಿನಂದನೆಗಳ ಸಲ್ಲಿಸಿ ಮಾಣಿ ಮಹಾಶಕ್ತಿ ಕೇಂದ್ರ ವತಿಯಿಂದ ಕೊಡಜೆಯಲ್ಲಿ ವಿಜಯೋತ್ಸವ ಆಚರಿಸಲಾಯಿತು.

ಅನಂತಾಡಿ, ನೆಟ್ಲಮೂಡ್ನೂರು, ಮಾಣಿ, ಪೆರಾಜೆ ಶಕ್ತಿ ಕೇಂದ್ರಗಳ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕೊಡಾಜೆಯ ಜುಂಕ್ಷನ್ ನಲ್ಲಿ ಸಿಡುಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಈ ಸಂದರ್ಭ ಬಿಜೆಪಿ ಮಂಡಲ ಕಾರ್ಯದರ್ಶಿ ಸನತ್ ಕುಮಾರ್ ರೈ, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ,ಪ್ರಧಾನ ಕಾರ್ಯದರ್ಶಿ ನಾಗೇಶ್ ಭಂಡಾರಿ,ನೆರಳಕಟ್ಟೆ CA ಬ್ಯಾಂಕ್ ಅಧ್ಯಕ್ಷ ಪುಷ್ಪಾರಾಜ ಚೌಟ, ನಿರ್ದೇಶಕ ನಾರಾಯಣ ಶೆಟ್ಟಿ, ಅಶೋಕ್ ರೈ, ಮಾಣಿ ಶಕ್ತಿ ಕೇಂದ್ರ ಪ್ರಮುಖ್ ಹರೀಶ್ ಕುಲಾಲ್, ನೆಟ್ಲ ಮೂಡ್ನೂರು ಶಕ್ತಿ ಕೇಂದ್ರ ಪ್ರಮುಖ್ ಶ್ರೀ ಧನಂಜಯ, ಪೆರಾಜೆ ಶಕ್ತಿ ಕೇಂದ್ರ ಪ್ರಮುಖ್ ಶ್ರೀನಿವಾಸ್, ಹರೀಶ್ ಪಾಣುರ್,ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಬಂಟ್ರಿಂಜಾ, ಜೀವನ್ ಪೆರಾಜೆ, ಸುಶೀಲ ಆನಂದ್, ಬೂತ್ ಅಧ್ಯಕ್ಷರಾದ ರಮೇಶ್ ಗೌಡ, ಲೋಕೇಶ್ ಗೌಡ, ಪದಾಧಿಕಾರಿಗಳಾದ ಕಿರಣ್ ಬಂಟ್ರಿಜ,ದಯಾನಂದ ಗೌಡ, ಶಿವರಾಮ್ ಶೆಟ್ಟಿ, ಸತೀಶ್ ಗೌಡ, ವಿನೀತ್, ಕುಸುಮಧರ್ ಗೌಡ, ಪೂವಪ್ಪ ಗೌಡ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದರು
