ಪತ್ರಕರ್ತೆ ಕೋಡಿಬೆಟ್ಟು ರಾಜಲಕ್ಷ್ಮಿ ಬರೆದಿರುವ ಪ್ರಸಿದ್ಧ ನೃತ್ಯ ಕಲಾವಿದರ ಸಂದರ್ಶನಗಳ `ಲಲಿತ ಮಂಟಪ’ ಕೃತಿ ಬಿಡುಗಡೆ ಸಮಾರಂಭವು ನಗರದ ಸಪ್ನ ಬುಕ್ ಹೌಸ್‌ನಲ್ಲಿ ಬುಧವಾರ ನಡೆಯಿತು.

ಭಾರತ ದೇಶದ ಪ್ರಮುಖ ಎಂಟು ಶಾಸ್ತ್ರೀಯ ಕಲಾಪ್ರಕಾರಗಳಲ್ಲಿ ಸಾಧನೆ ಮಾಡಿದ ಪ್ರಸಿದ್ಧ ನೃತ್ಯಗುರುಗಳು, ಹಾಗೂ ಯಕ್ಷಗಾನ, ಕಟ್ಟೈಕೂತ್ತು, ದೇವಾಲಯ ನೃತ್ಯ, ವಿಲಾಸಿನಿ ನಾಟ್ಯ ಪ್ರಕಾರಗಳಲ್ಲಿ ಸಾಧನೆ ಮಾಡಿದ ಪ್ರಸಿದ್ಧ ನೃತ್ಯ ಗುರುಗಳ 20 ಸಂದರ್ಶನಗಳು ಈ ಪುಸ್ತದಲ್ಲಿ ಇವೆ. ಈ ಪುಸ್ತಕ ಬಿಡುಗಡೆ ಮಾಡಿದ ಸಂದರ್ಭದಲ್ಲಿ
ಹಿರಿಯ ಸಾಹಿತಿ ಡಾ.ಕೆ.ಚಿನ್ನಪ್ಪ ಗೌಡ ಮಾತನಾಡಿ, ನಾಡಿನ ಬಹುಮುಖ್ಯ ಕಲಾವಿದರ ಸಂದರ್ಶಗಳ ಮೂಲಕ ಲಲಿತ, ಮಧುರ ಮತ್ತು ಸುಂದರ ಲೇಖನಗಳು ಲಲಿತ ಮಂಟಪದಲ್ಲಿದೆ. ಕಲಾವಿದರ ಬದುಕು ಮತ್ತು ಕಲಾ ಪ್ರಕಾರವನ್ನು ಬಗೆಯುವ ಕೆಲಸ ರಾಜಲಕ್ಷಿ÷್ಮ ಮಾಡಿದ್ದಾರೆ. ಪ್ರತಿಯೊಬ್ಬರ ಕಲಾವಿದರ ಬದುಕು ಕೂಡಾ ಅದ್ಭುತ. ಕಲೆಯ ವಿಸ್ಮಯ ಜಗತ್ತು ತೆರೆದುಕೊಂಡಿದೆ. ಕಲೆಗಳ ಗಂಭೀರ ಅಧ್ಯಯನಗಳಿವೆ. ನಾಟ್ಯ ಪರಂಪರೆ, ಕಲಾವಿದರ ತ್ಯಾಗ, ಸವಾಲುಗಳ ಸಮಗ್ರ ಮಾಹಿತಿ ಇದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು.

ಪುಸ್ತಕ ಬಿಡುಗಡೆ ಮಾಡಿದ ಡಾ. ಚಿನ್ನಪ್ಪ ಗೌಡ ಅವರು ಪುಸ್ತಕವನ್ನು ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರಿಗೆ ಹಸ್ತಾಂತರಿಸಿದರು. ಅವರು ಕೃತಿ ಆಧರಿಸಿದ ವಿನೂತನ ರಂಗ ಪ್ರಯೋಗ ಗೆಜ್ಜೆ ಬರೆದ ಅಕ್ಷರವನ್ನು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಪ್ರಸ್ತುತಪಡಿಸಿದರು. ಲಲಿತ ಮಂಟಪ ಕೃತಿಯಲ್ಲಿದ್ದ ಸಂದರ್ಶನಗಳ ಪೈಕಿ,
ಮೋಹಿನಿಯಾಟಂ ಕಲಾವಿದೆ ನಿರ್ಮಲಾ ಪಣಿಕರ್, ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್, ಭರತನಾಟ್ಯ ಕಲಾವಿದೆ ವಿದುಷಿ ರಮಾವೈದ್ಯನಾಥನ್, ವಿದುಷಿ ನರ್ತಕಿ ನಟರಾಜ್, ಅವರ ಸಂದರ್ಶನಗಳ ಪ್ರಾತಿನಿಧಿಕ ರಂಗರೂಪಪ್ರಸ್ತುತಪಡಿಸಿದರು. ಹಿಮ್ಮೇಳದಲ್ಲಿ ರಾಕೇಶ್ ಹೊಸಬೆಟ್ಟು, ಪವಿತ್ರಾ ಮಯ್ಯ ಸಹಕರಿಸಿದರು.
ಕೃತಿಕರ್ತೆ ರಾಜಲಕ್ಷ್ಮಿ ಕೋಡಿಬೆಟ್ಟು ಸ್ವಾಗತಿಸಿದರು. ಲೇಖಕಿ ದೇವಿಕಾ ನಾಗೇಶ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

