ಬಂಟ್ವಾಳ: ಜೈನ ಸಮುದಾಯವು ಅಲ್ಪಸಂಖ್ಯಾತರಿಗೆ ಸಿಗುವ ಹಲವಾರು ಸರಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಜೈನ್ ಮಿಲನ್‌  ಸಹಾಯ ಹಸ್ತವನ್ನು ನೀಡಬೇಕು. ವಿವಿಧ ಸವಲತ್ತುಗಳ ಮಾಹಿತಿಯನ್ನು ಜೈನ್ ಮಿಲನ್ ಗಳು‌ ನೀಡುವ ಮೂಲಕ ಸಮಾಜದ ಸ್ಥಿತಿಯನ್ನು ಉತ್ತಮಪಡಿಸಲು ಸಹಕರಿಸಬೇಕೆಂದು ವಿಶ್ರಾಂತ ಪಶುವೈದ್ಯಾಧಿಕಾರಿ ಹಾಗೂ ಧಾರ್ಮಿಕ‌ ಸಂಘಟಕ ಡಾ. ಜಯಕೀರ್ತಿ ಜೈನ್ ಬೆಳ್ತಂಗಡಿ ಹೇಳಿದರು.
ಅವರು ಬಂಟ್ವಾಳ ಬಸದಿಯಲ್ಲಿ ಭಾರತೀಯ ಜೈನ್ ಮಿಲನ್‌ ಏರ್ಪಡಿಸಿದ ಧಾರ್ಮಿಕ‌ ಸಭೆಯಲ್ಲಿ ಮುಖ್ಯ‌ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಭ.1008 ಶ್ರೀ ಆದಿನಾಥ ಜಿನ ಚೈತ್ಯಾಲಯದ ಜಿನಬಿಂಬ ಪ್ರತಿಷ್ಠಾ ಮಹೋತ್ಸವದ 57ನೇ ವರ್ಧಂತ್ಯುತ್ಸವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ತೋರಣ ಮುಹೂರ್ತ, ಬಸದಿಯ ವಿಮಾನ ಶುದ್ಧಿ ಮತ್ತು 24 ತೀರ್ಥಂಕರರ ಆರಾಧನೆ , ದ್ರವ್ಯಾಭಿಷೇಕವು  ಶ್ರೀ ಆದಿನಾಥ‌‌ಸ್ವಾಮಿ ಜಿನ ಚೈತ್ಯಾಲಯ ಬಂಟ್ವಾಳದಲ್ಲಿ ಭಾನುವಾರ ಜರಗಿತು.

ಪರಮ ಪೂಜ್ಯ 108 ಮುನಿಶ್ರೀ ಆದಿತ್ಯಸಾಗರ ಮಹಾರಾಜರ ಆಶೀರ್ವಾದದೊಂದಿಗೆ ನೀಡಿರುವ ಪ್ರತಿಷ್ಠೆಗೊಂಡ 24 ತೀರ್ಥಂಕರರ ರತ್ನ ಬಿಂಬಗಳಿಗೆ ಶ್ರಾವಕರಿಂದ ವಿಶೇಷ ದ್ರವ್ಯಗಳ ಅಭಿಷೇಕವು ಪುರೋಹಿತರಾದ ಪುಷ್ಪರಾಜ ಇಂದ್ರರ ನೇತೃತ್ದಲ್ಲಿ ನೆರವೇರಿತು.
54 ಕಲಶ ಅಭಿಷೇಕ,ಮಹಾಮಾತೆ ಶ್ರೀ ಪದ್ಮಾವತಿ‌ ಅಮ್ಮನವರಿಗೆ‌ ಅಲಂಕಾರ ಪೂಜೆ,ಕ್ಷೇತ್ರಪಾಲ ಪೂಜೆ ವಿವಿಧ ಧಾರ್ಮಿಕ ವಿಧಿವಿಧಾನದೊಂದಿಗೆ ಸಂಪನ್ನ ಗೊಂಡಿತು.
ಭಗವಾನ್ ದಾಸ್ ಮತ್ತು ಮಕ್ಕಳಿಂದ ಬಸದಿಗೆ ಅಷ್ಟಮಂಗಳಗಳ ಸಮರ್ಪಣೆ ನಡೆಯಿತು.ಶ್ರಾವಕ ಶ್ರಾವಕಿಯರು ಜಿನಮಂತ್ರ ಪಠಿಸಿದರು.
ಬಂಟ್ವಾಳ ಜೈನ್ ಮಿಲನ್‌ ಅಧ್ಕಕ್ಷ ರಾಜೇಂದ್ರ ಜೈನ್ ಪೆರ್ಲರ‌ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು.
ಶ್ರಾವಕಿ ಶ್ರೀಮತಿ ಬ್ರಾಹ್ಮಿಲಾ ಜೈನ್ ರವರನ್ನು ಜೈನ್ ಮಿಲನ್ ವತಿಯಿಂದ ಸನ್ಮಾನಿಸಲಾಯಿತು.
ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷ ಸುದರ್ಶನ್ ಜೈನ್ ಮಾತನಾಡಿ ಯವಜನತೆ ಹೆಚ್ಚಿನ‌ ಸಂಖೆಯಲ್ಲಿ ಭಾಗವಹಿಸುವ ಮೂಲಕ  ಸಂಘಟನೆಯನ್ನು  ಬಲಪಡಿಸಬೇಕಾಗಿದೆ‌ ಎಂದರು. ಜೈನ್ ಮಿಲನ್ ಕಾರ್ಯದರ್ಶಿ ಜಯಕೀರ್ತಿ ಇಂದ್ರ, ಭಗವಾನ್ ದಾಸ್,
ಸುರೇಂದ್ರ ಧರ್ಮಸ್ಥಳ, ನಿವೃತ್ತ ಶಿಕ್ಷಕ ಜಯಾನಂದ ಪೆರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೈನ್ ಮಿಲನ್ ವಲಯ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್  ಪ್ರಸ್ತಾವನೆ ಗೈದರು, ಕಾರ್ಯದರ್ಶಿ ಜಯಕೀರ್ತಿ ಸ್ವಾಗತಿಸಿದರು,ಹರ್ಷರಾಜ ಬಳ್ಳಾಲ್ ವಂದಿಸಿದರು. 

By Suddi9

Leave a Reply

Your email address will not be published. Required fields are marked *