ಬಂಟ್ವಾಳ:  ಕಂಬಳ ತುಳು ನಾಡಿನ ಸಂಸ್ಕೃತಿಯಾಗಿದೆ. ನಿರಂತರ  ಕಂಬಳ ನಡೆಸುತ್ತಿರುವ ಹೊಕ್ಕಾಡಿಗೋಳಿ ಕಂಬಳ ಸಮಿತಿ ಕಾರ್ಯ ಅಭಿನಂದನೀಯ  ಎಂದು ದ.ಕ.ಸಂಸದ ಕ್ಯಾ.ಬೃಜೇಶ್ ಚೌಟ ಅವರು ಹೇಳಿದರು.


ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಮಹಿಷಮರ್ಧಿನಿ ಕಂಬಳ ಸಮಿತಿ ವತಿಯಿಂದ ನಡೆದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ  ಜೋಡುಕರೆ ಬಯಲು ಕಂಬಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು , ಯಲಹಂಕ ಶಾಸಕ ವಿಶ್ವನಾಥ್, ಮಾಜಿ ಸಚಿವ ಬಿ. ರಮಾನಾಥ ರೈ ಶುಭ ಹಾರೈಸಿದರು.    ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಅರುಣ್‌ಶ್ಯಾಂ,  ಎಡಿಶನಲ್ ಎಸ್ಪಿ ಅನಿಲ್ ಕುಮಾರ್‌ಬೂಮ ರೆಡ್ಡಿ, ಶ್ರೀ ಕ್ಷೇತ್ರ ಪೂಂಜದ ಪ್ರ.ಅರ್ಚಕ ಪ್ರಕಾಶ್ ಆಚಾರ್ಯ,  ಕಂಬಳ ಸಮಿತಿ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ,ಭಾರತೀಯ ವಾಯು ಸೇನೆಯ ಸೌಮ್ಯಲತಾ ಶೆಟ್ಟಿ,  ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ಬಳ್ಕುಂಜೆ ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಸಿದ್ದಕಟ್ಟೆ ವೈದ್ಯ ಡಾ. ಪ್ರಭಾಚಂದ್ರ, ಕಕ್ಯಪದವು ಕಂಬಳ ಸಮಿತಿ ಅಧ್ಯಕ್ಷ ಸುದರ್ಶನ್ ಬಜ, ಪೆದಮಲೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿಶಂಕರ ಶೆಟ್ಟಿ ಬಡಾಜೆಗುತ್ತು, ಗುತ್ತಿಗೆದಾರ ರಂಜನ್ ಶೆಟ್ಟಿ ಅರಳ, ರೆಡ್‌ಕ್ರಾಸ್ ದ.ಕ.ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ, ಮೂಡುಬಿದಿರೆ ಪೊಲೀಸ್ ಠಾಣಾ ಎಸ್ ಐ ಸಂದೇಶ್, ಸಹಕಾರ ರತ್ನ ಶಾಂತಾರಾಮ ಶೆಟ್ಟಿ ಬಾರ್ಕೂರು,    ಸಂಗಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಕುಲಾಲ್,  ಬಲವಂಡಿ ಕ್ಷೇತ್ರ ಗಡಿ ಪ್ರಧಾನ ಎಂ.ದುರ್ಗಾದಾಸ್ ಶೆಟ್ಟಿ, ಚಲನಚಿತ್ರ ನಟ, ನಿರ್ದೇಶಕ ಜೆ.ಪಿ.ತೂಮಿನಾಡು,ಮನ್ಮಥ ಶೆಟ್ಟಿ ಪುತ್ತೂರು  ಮೊದಲಾದ ಗಣ್ಯರು ಭಾಗವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ಗುಂಡ್ಯಾರು ಸಂಜೀವ ಶೆಟ್ಟಿ, ಪ್ರಧಾನ ಕಾರ್ಯದರ್ಶಿಪ್ರಭಾಕರ ಹುಲಿಮೇರು, ಸಮಿತಿಯ ಪದಾಽಕಾರಿಗಳಾದ ಜಗತ್ಪಾಲ ಶೆಟ್ಟಿ ಉಮನೊಟ್ಟು, ಕರಿಯಣ್ಣ ಶೆಟ್ಟಿ ಹಕ್ಕೇರಿ,ರಾಜೇಶ್ ಜಿ.ಶೆಟ್ಟಿ, ಪುಷ್ಪರಾಜ್ ಜೈನ್, ಸಂತೋಷ್ ಶೆಟ್ಟಿ ಕೊನೆರೊಟ್ಟುಗುತ್ತು, ಸತೀಶ್ ಮಠ, ಚಂದ್ರಶೇಖರ ಸಿದ್ದಕಟ್ಟೆ , ಸುರೇಂದ್ರ ಪೂಜಾರಿ,ಕುಟ್ಟಿ ಶೆಟ್ಟಿ, ಕರಿಯಣ್ಣ ಶೆಟ್ಟಿ, ರಾಜು ಶೆಟ್ಟಿ, ಸುಽರ್ ಶೆಟ್ಟಿ, ಪ್ರವೀಣ್ ಕುಲಾಲ್, ಸುಂದರ ಪೂಜಾರಿಮತ್ತಿತರರು ಉಪಸ್ಥಿತರಿದ್ದರು.
 ಇದೇ ವೇಳೆ ಶಾಸಕ ವಿಶ್ವನಾಥ್, ಸೌಮ್ಯಲತಾ ಹಾಗೂ ಕಂಬಳಕ್ಕೆ ಸಹಕರಿಸಿದ ಗಣ್ಯರನ್ನು  ಸಮ್ಮಾನಿಸಲಾಯಿತು.  ಎಲಿಯ ಮಾಗಣೆ ವತಿಯಿಂದ ೧೦ ವರ್ಷಗಳಿಂದ ಕಂಬಳ ಸಮಿತಿ ಅಧ್ಯಕ್ಷತೆ ವಹಿಸಿ ಕಂಬಳ ನಡೆಸುತ್ತಿರುವ ರಶ್ಮಿತ್ ಶೆಟ್ಟಿಅವರನ್ನು ಸಮ್ಮಾನಿಸಲಾಯಿತು.
 ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಸ್ವಾಗತಿಸಿ, ದಿನೇಶ ಸುವರ್ಣ ರಾಯಿ, ಪ್ರಜ್ವಲ್ ಸಿದ್ದಕಟ್ಟೆ  ಮತ್ತು  ಶಾಜಲ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *