ಬಂಟ್ವಾಳ : ತಾಲೂಕಿನ  ಪುದು ಗ್ರಾಮದ ಫರಂಗಿಪೇಟೆಯ ಕಲ್ಲತಡಮೆಯಲ್ಲಿ ಪ್ರಾಚೀನ ಶ್ರೀರಕ್ತೇಶ್ವರೀ, ಜುಮಾದಿ ಬಂಟ ಮತ್ತು ಮೈಸಂದಾಯ ದೃೆವಗಳ ದೈವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.ಪೊಳಲಿ ಸುಬ್ರಹ್ಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ವಿವಿಧ ವೈಧಿಕ ವಿಧಾನಗಳು ನೆರವೇರಿತು.ಸ್ಥಳೀಯ ಪ್ರಮುಖರು,ಗಣ್ಯರು ಈ ಸಂದರ್ಭ ಉಪಸ್ಥಿತರಿದ್ದರು.


ಫರಂಗಿಪೇಟೆಯಕಲ್ಲತಡಮೆಯಲ್ಲಿ ಜುಮಾದಿ ಬಂಟ ಮೃೆಸಂದಾಯ ದೃೆವಗಳ ಸಾನಿಧ್ಯಕ್ಕೆ ಸಂಬಂಧಿಸಿದಂತೆ ಕೆಲ ಸಮಯಗಳಿಂದ  ಸ್ಥಳೀಯವಾದ ಕೆಲ ಮನೆಗಳಲ್ಲಿ   ಲಕ್ಷಣಗಳು ಕಂಡು ಬರುತ್ತಿತ್ತು. ಈಚೆಗೆ ಇಲ್ಲಿನ ನಿವಾಸಿಗಳು ಸೇರಿ ಫರಂಗಿಪೇಟೆಯ ಬಾಲಿಮಾರು ಕೋರ್ದಬ್ಬು ದೃೆವ ದರ್ಶನದಲ್ಲಿ ನಿವೇದಿಸಿ,ತಾಂಬೂಲ ಪ್ರಶ್ನೆಇರಿಸಿದಾಗ  ದೃೆವಗಳ ಸಾನಿಧ್ಯವನ್ನು ಉಲ್ಲೇಖಿಸಿ ಜೀರ್ಣೋದ್ಧಾರ ಮಾಡಲು ಮಾರ್ಗದರ್ಶನವಾಯಿತು.


ನೂರಾರು ವರ್ಷಗಳ ಹಿಂದೆ  ಇಲ್ಲಿಯ ಜೆೃನರಾಜಮನೆತನದಲ್ಲಿ ಈ ಸನ್ನಿಧಿಗಳು ಆರಾಧನೆಗೊಳ್ಳುತ್ತಿದ್ದವು ಹಾಗೂ
ಪ್ರಸಕ್ತ ಸುಜೀರ್ ನಾಯಕ್ ಕುಟುಂಬದ ಮೂಲ ಮನೆಗಳಲ್ಲಿ ಒಂದಾಗಿರುವ ಕಲ್ಲತಡಮೆಯ  ಚಾವಡಿ ಮನೆಯಲ್ಲಿ
ಈ  ದೃೆವಗಳೊಂದಿಗೆ ಕಲ್ಲುರ್ಟಿ ಪಂಜುರ್ಲಿ ದೃೆವಗಳು, ಈ ಮನೆಯ ಹೊರ ಭಾಗದಲ್ಲಿ  ನಾಗ ಮತ್ತು ರಕ್ತೇಶ್ವರಿ
ಜೊತೆಗೆ ಚಾಮುಂಡಿ ಗುಳಿಗಭೃೆರವ ಸಾನಿಧ್ಯಗಳಿದ್ದವು ಎಂದುಪ್ರಶ್ನಾ ಚಿಂತನೆಯಲ್ಲಿ ಗೋಚರಿಸಿದೆ.


ಇವುಗಳಲ್ಲಿ  ರಕ್ತೇಶ್ವರಿ ಅಮ್ಮ, ಜುಮಾದಿ ಬಂಟ ,ಮೃೆಸಂದಾಯ  ದೃೆವ ಮತ್ತು ಪಂಜುರ್ಲಿಯೊಂದಿಗೆ ಕಲ್ಲುರ್ಟಿ ದೃೆವ ಸೇರ್ಪಡೆಯ ಪುನರ್ ಪ್ರತಿಷ್ಠಾ ವಿಧಿಗಳು ಮತ್ತು ನೇಮವು ಆಗಬೇಕಾಗಿವೆ.ಈಗಾಗಲೇ ಬಾಲಾಲಯದಲ್ಲಿ
ದೃೆವಗಳ ಪ್ರತಿಷ್ಠಾಪನೆ ನಡೆದಿದ್ದು,ಜೀರ್ಣೋದ್ಧಾರದ ಸಮಿತಿಯು ರಚನೆಗೊಂಡಿದೆ. ಈಕುರಿತು
ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಲಾಯಿತು.

By Suddi9

Leave a Reply

Your email address will not be published. Required fields are marked *