ಬಂಟ್ವಾಳ ; ಸ್ವಾರ್ಥವಿಲ್ಲದ ಶ್ರಮ, ಸಮಯ ಮತ್ತು ಸಂಪನ್ಮೂಲಗಳನ್ನು ಹಂಚಿಕೊಂಡು ನಿರ್ಮಾಣಗೊಂಡ  ಮನೆ  ಯುವ ಹೃದಯಗಳ  ನಿಸ್ವಾರ್ಥ ಸೇವೆಯಿಂದ ರೂಪುಗೊಂಡ ಆಶ್ರಯ.ನಾವು ಸಾಕ್ಷಿಯಾಗಿರುವುದು ಕೇವಲ ಒಂದು ಮನೆಯ ಹಸ್ತಾಂತರ ಕಾರ್ಯಕ್ರಮವಲ್ಲ, ಇದು ಮಾನವೀಯತೆ, ಸೇವಾಭಾವದ ಜೀವಂತ ನಿದರ್ಶನ ,ಯುವವಾಹಿನಿ ಸಂಸ್ಥೆ  ಅಶಕ್ತರ ಬಾಳಿನಲ್ಲಿ ನಿಜವಾದ ನೆಮ್ಮದಿಯ ಬೆಳಕನ್ನು ಮೂಡಿಸಿದೆ ಎಂದು ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ ತಿಳಿಸಿದ್ದಾರೆ.


ಬುಧವಾರ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಾಣಿ ಘಟಕದ ಸಹಕಾರದಲ್ಲಿ ತಾಲೂಕಿನ  ಅನಂತಾಡಿ ಗ್ರಾಮದ ಪೆಲತ್ತಡಿ ಕಮಲ ಪೂಜಾರ್ತಿ‌ಯವರಿಗೆ “ಯುವಾಶ್ರಯ, ”  ಮನೆ ಹಸ್ತತಾರ ಹಾಗೂ ತುಳಸಿ ಪೂಜೆ ಕಾರ್ಯಕ್ರಮದಲ್ಲಿ   ನೂತನ ಮನೆಯ ಕೀ ಹಸ್ತಾಂತರಿಸಿ ಅವರು ಮಾತನಾಡಿದರು.
ಒಂದು ಬಡ ಕುಟುಂಬಕ್ಕೆ ಆಶ್ರಯವೆಂದರೆ ಅವರ ಬದುಕಿನ ಅತ್ಯಂತ ದೊಡ್ಡ ಕನಸು. ಆ ಕನಸನ್ನು ನಿಜಗೊಳಿಸುವ ಮೂಲಕ ಯುವವಾಹಿನಿಯ  ಯುವಕರು ಸಾಮಾಜಿಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ ಎಂದು ಅವರು ಹೇಳಿದರು.


ಅಖಿಲ ಭಾರತ ಬಿಲ್ಲವ ಯೂನಿಯನ್ (ರಿ.) ಅಧ್ಯಕ್ಷ ಅಧ್ಯಕ್ಷ ನವೀನ್ ಚಂದ್ರ ಡಿ ಸುವರ್ಣ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಕಾರ್ಯಕ್ರಮದ  ಅಧ್ಯಕ್ಷತೆ ಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ವಹಿಸಿದ್ದರು. ಆಶ್ರಯ ಮನೆಯ ಫಲಾನುಭವಿಗಳ ಪರವಾಗಿ ಸತೀಶ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು.


  ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ.ಆರ್ ., ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ರವಿಚಂದ್ರ ರವರನ್ನು ಈ ಸಂದರ್ಭ  ಗೌರವಿಸಲಾಯಿತಲ್ಲದೆ ಮನೆ ನಿರ್ಮಿಸಲು ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ, ಮಾಣಿ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಸೂರ್ಯ, ವಕೀಲ ರಂಜಿತ್ ಪೂಜಾರಿ ಮೈರ, ಬಂಟ್ವಾಳ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಸುರೇಶ್ ಪೂಜಾರಿ  ಬಾಕಿಲ, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ,  ಸಮಾಜ ಸೇವಾ ನಿರ್ದೇಶಕ ರವಿಚಂದ್ರ ಬಾಬಣ ಕಟ್ಟೆ,  ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕ ಕಿರಣ್ ಗೋಳಿಕಟ್ಟೆ ಉಪಸ್ಥಿತರಿದ್ದರು.


  ಸುಮಲತಾ ಎನ್ ಸುವರ್ಣ, ಯಶವಂತ ದೇರಾಜೆ, ಬಿರುವೆರ್  ಕಡೇಶಿವಾಲಯ ಅಧ್ಯಕ್ಷ ಯಶವಂತ ಪತ್ತು ಕೊಡಂಗೆ, ಮಾಣಿ ನಾರಾಯಣ ಗುರು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯನ್, ಯುವವಾಹಿನಿ  ಕೇಂದ್ರ ಸಮಿತಿಯ ಒಂದನೇ ಉಪಾಧ್ಯಕ್ಷರಾದ ಅಶೋಕ್ ಪಡ್ಪು, ಜತೆ ಕಾರ್ಯದರ್ಶಿ ಭಾಸ್ಕರ್ ಕೋಟ್ಯಾನ್, ಸಾಂಸ್ಕೃತಿಕ ನಿರ್ದೇಶಕ ಸುಶಾಂತ್ ಕರ್ಕೇರ, ಮಾಜಿ ಅಧ್ಯಕ್ಷರುಗಳಾದ  , ಜಯಂತ್ ನಡುಬೈಲು, ಡಾ. ರಾಜಾರಾಮ್ ಕೆ ಬಿ, ರಾಜೇಶ್ ಬಿ, ಪ್ರೇಮನಾಥ್ ಕೆ,  ಯುವವಾಹಿನಿ ವಿಟ್ಲ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ವಿಟ್ಲ  ಅವರು ವಿಶೇಷ ಆಹ್ವಾನಿತರಾಗಿ  ಭಾಗವಹಿಸಿದ್ದರು.


ಮಾಣಿ ಘಟಕದ ಅಧ್ಯಕ್ಷ ಶಿವರಾಜ್ ಪಿ ಆರ್ ಪ್ರಸ್ತಾವಿಸಿ, ಸ್ವಾಗತಿಸಿದರು, ಕಾರ್ಯದರ್ಶಿ ದೀಪಕ್ ಪೆರಾಜೆ  ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *