Published On: Wed, Oct 29th, 2025

ಬಂಟ್ವಾಳ ತಾಲೂಕು ಕುಲಾಲ ಸಂಘದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನಿರಂತರ ವಿದ್ಯಾರ್ಥಿ ವೇತನ ವಿತರಣೆ,ವೆಬ್ ಸೈಟ್ ಲೋಕಾರ್ಪಣೆ

ಬಂಟ್ವಾಳ : ಐಎಎಸ್, ಐಪಿಎಸ್  ಆಗಲು ವಿದ್ಯಾರ್ಥಿಗಳು ಆಸಕ್ತಿ ತೋರಿಸಬೇಕು, ಪ್ರತಿಭಾವಂತ ವಿದ್ತಾರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣದ ಕುರಿತು ಮಾಹಿತಿ ನೀಡುವ  ಅಗತ್ಯವಿದ್ದು,ಈ ನಿಟ್ಟಿನಲ್ಲಿ ಎಲ್ಲರ ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ‌ನಿವೃತ್ತ ಪೊಲೀಸ್ ಅಧಿಕಾರಿ ಕುಶಾಲಪ್ಪ ಮೂಲ್ಯ ತಿಳಿಸಿದರು.


ಬಿ.ಸಿ.ರೋಡಿನ ಫೊಸಳ್ಳಿ  ಸಮುದಾಯವಭವನದಲ್ಲಿ  ಬಂಟ್ವಾಳ ತಾಲೂಕು ಕುಲಾಲ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಈ ಸಂದರ್ಭ ಬಂಟ್ವಾಳ ತಾಲೂಕು ಕುಲಾಲ ಸಂಘದ ವೆಬ್ ಸೈಟ್ ಲೋಕಾರ್ಪಣೆಗೈದ ದ.ಕ. ಜಿಲ್ಲಾ ಕುಲಾಲ ಕುಂಬಾರ ಯುವವೇದಿಕೆಯ ಅಧ್ಯಕ್ಷ ಲ. ಅನಿಲ್ ದಾಸ್ ಮಾತನಾಡಿ, ಯಾವುದೇ ಬೇದಭಾವ ತೋರಿಸದೆ ಏಕ ಮನಸ್ಸಿನಿಂದ ಸಮಾಜದ ಸಂಘಟನೆಯನ್ನು ಗಟ್ಟಿಗೊಳಿಸಬೇಕು ಎಂದರು.


ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹನ್ನೊಂದು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಅದೇ ರೀತಿ 39 ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನ ಮತ್ತು ಬಡಕುಟುಂಬದ  ಪ್ರತಿಭಾವಂತ  59 ವಿದ್ಯಾರ್ಥಿಗಳಿಗೆ ನಿರಂತರ ವಿದ್ಯಾರ್ಥಿವೇತನ ನೀಡಲಾಯಿತು.


ಏಷ್ಯಾ ಡೆಫ್ ರಾಪಿಡ್ ಚಾಂಪಿಯನ್ ಚೆಸ್ ನಲ್ಲಿ ಚಿನ್ನದ ಪದಕ ವಿಜೇತೆ ಅಂತಾರಾಷ್ಟ್ರೀಯ ಚೆಸ್ ಆಟಗಾರ್ತಿ ಯಶಸ್ವಿ ಕುಲಾಲ್ ರವರನ್ಮು ಸನ್ಮಾನಿಸಲಾಯಿತು.
ನಾಸಿಕ್ ಹೊಟೇಲ್ ಉದ್ಯಮಿ ಗಣೇಶ್ ಬಂಗೇರ ಭಂಡಾರಿಬೆಟ್ಟು, ಪದ್ಮಿನಿ ದೇವಣ್ಣ, ಉದ್ಯಮಿ ದಯಾಯೋಗೀಶ್, ಸಿದ್ದಕಟ್ಟೆ ಸರಕಾರಿ ಪದವಿ ಕಾಲೇಜಿನ ಸಹಪ್ರಾಧ್ಯಾಪಕ ಡಾ. ಅಭಿನಂದನ್ ಕುಲಾಲ್, ಮಂಗಳೂರು ವಿಶ್ವವಿದ್ಯಾನಿಲಯ ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕ ಡಾ. ಆನಂದ್ ಎಮ್. ಕಿದೂರು,ಪತ್ರಕರ್ತ ವಿನೋದ್ ಪುದು, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಸುರೇಶ್ ಕುಮಾರ್ ನಾವೂರ ವೇದಿಕೆಯಲ್ಲಿದ್ದರು.
ಉಪಾಧ್ಯಕ್ಷೆ ಜಲಜಾಕ್ಷಿ ಕುಲಾಲ್ ,ಮೀನಾಕ್ಷಿ ಮತ್ತು ಪ್ರೇಮ ಪೊಸಳ್ಳಿ,  ಸುಶೀಲಾ, ಗಣೇಶ್ ನರಿಕೊಂಬು, ಸತೀಶ್ ಸಂಪಾಜೆ,  ತಾರನಾಥ ಮೊಡಂಕಾಪು ಮತ್ತು  ರಾಘವೇಂದ್ರ, ರಮೇಶ್ ಸಾಲ್ಯಾನ್ ಕೈಕುಂಜೆ   ವಿವಿಧ ಪ್ರೋತ್ಸಾಹಧನ ಹೆಸರಿನ ಪಟ್ಟಿ ವಾಚಿಸಿದರು.


  ಪ್ರೇಮನಾಥ ನೇರಂಬೋಳು ಮತ್ತು ಚಿರಾಗ್ ಕಾಮಾಜೆ ವೆಬ್ ಸೈಟ್ ಬಗ್ಗೆ ಮಾಹಿತಿ ನೀಡಿದರು. ಸುರೇಶ್ ಕುಲಾಲ್ ಬಂಟ್ವಾಳ, ದೇವದಾಸ ಅಗ್ರಬೈಲು, ಗಣೇಶ್ ಬೆದ್ರಗುಡ್ಡೆ, ರಾಧಾಕೃಷ್ಣ ಬಂಟ್ವಾಳ, ಮಚ್ಚೇಂದ್ರ ಸಾಲ್ಯಾನ್, ರಾಜೇಶ್ ರಾಯಿ, ಯೋಗೀಶ್ ಬಂಗೇರ ಸಹಕರಿಸಿದ್ದರು


ಪ್ರಧಾನ ಕಾರ್ಯದರ್ಶಿ ಯಾದವ ಕುಲಾಲ್ ಪ್ರಸ್ತಾವಿಸಿ,  ಸ್ವಾಗತಿಸಿದರು. ಕೋಶಾಧಿಕಾರಿ ಸೋಮನಾಥ ಸಾಲ್ಯಾನ್ ವಂದಿಸಿದರು. ಜಯಂತ ಅಗ್ರಬೈಲು ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter