Published On: Tue, Oct 28th, 2025

ಔಷಧ ವ್ಯಾಪಾರಸ್ಥರ ಸಂಘ ದ ನೂತನ ಪದಾಧಿಕಾರಗಳ ಪದಗ್ರಹಣ 

ಬಂಟ್ವಾಳ : ತಾಲೂಕು ಔಷಧ ವ್ಯಾಪಾರಸ್ಥರ ಸಂಘ ದ ಪದಗ್ರಹಣ ಮತ್ತು ನಿರಂತರ ಕಲಿಕಾ ಕಾರ್ಯಕ್ರಮ ಬಿ.ಸಿ. ರೋಡ್ ನ ರಿಕ್ಷಾ ಭವನ ದಲ್ಲಿ ನಡೆಯಿತು.

ಸಮಾರಂಭದ ಅಧ್ಯಕ್ಷತೆಯನ್ನು ರಾಮ್ ದಾಸ್ ಶೆಣೈ ಅವರು ಅಧ್ಯಕ್ಷತೆವಹಿಸಿದ್ದರು.   ನೂತನ ಅಧ್ಯಕ್ಷರಾಗಿ  ಬಂಟ್ವಾಳ ರೋಶನಿ ಮೆಡಿಕಲ್ ನ ರಿಚರ್ಡ್ ಡಿಸೋಜಾ,ಫರಂಗಿಪೇಟೆ ಸಿಟಿ ಮೆಡಿಕಲ್ ನಸುಕುಮಾರ,ಕಲ್ಲಡ್ಕ ಗಣೇಶ್ ಮೆಡಿಕಲ್ ಕಲ್ಲಡ್ಕ ಚಂದ್ರಶೇಖರ್ ರೈ ಕಾರ್ಯದರ್ಶಿಯಾಗಿ, ಬಿ.ಸಿ.ರೋಡು ಶ್ರೀದೇವಿ ಮೆಡಿಕಲ್ ನ ಜಯಕೀರ್ತಿಕೋಶಾಧಿಕಾರಿಯಾಗಿ  ಪದಗೃಹಣ ಸ್ವೀಕರಿಸಿದರು.


ಪಾಣೆಮಂಗಳೂರು ದುರ್ಗಾ ಮೆಡಿಕಲ್  ನಪ್ರಭಾಕರ್ ಭಟ್ ನೂತನ ಪದಾಧಿಕಾರಿಗಳಿಗೆ  ಪದ ಪ್ರದಾನ ನೆರವೇರಿಸಿದರು.ದ . ಕ. ನಿರಂತರ ಕಲಿಕಾ ಉಪ  ನಿಯಂತ್ರಣಾಧಿಕಾರಿ ಟಿ.ಪಿ. ಸುಜಿತ್ ಅವರು ಮತ್ತು ಬರುವ ಔಷಧ ಮತ್ತು ಇನ್ನಿತರ  ನಿಭಂಧನೆಗಳ ಬಗ್ಗೆ ಮಾಹಿತಿ ನೀಡಿದರು.


ಎಸ್ ಕೆ ಡಿ ಸಿ ಮತ್ತು ಡಿ ಎ ಅಧ್ಯಕ್ಷಅರುಣ್ ಶೆಟ್ಟಿ,ಕಾರ್ಯದರ್ಶಿ ಡಾ.ಎ.ಕೆ. ಜಮಾಲ್ ಅತಿಥಿಗಳಾಗಿ ಭಾಗವಹಿಸಿ  ಶುಭ ಹಾರೈಸಿದರು.


ಬಿ.ಸಿ.ರೋಡು ಗಣೇಶ್ ಮೆಡಿಕಲ್ ನ ವಿನಯ್ ರೈ ಸಲಹೆ,ಸೂಚನೆಯನ್ನಿತ್ತರು‌ರಾಜೇಂದ್ರ ಜೈನ್  ಕಾರ್ಯಕ್ರಮ ನಿರೂಪಿಸಿದರು. ಲ.ಚಂದ್ರಶೇಖರ್ ರೈ  ವಂದಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter