ಬಂಟ್ವಾಳ:ಹಿಂದು ಮುಖಂಡ ಭರತ್ ಕುಮ್ಡೇಲು ಅವರಿಗೆ ಪಿತೃ ವಿಯೋಗ
ಕೈಕಂಬ:ಭಜರಂಗದಳದ ಮುಖಂಡ ಭರತ್ ಕುಮ್ಡೇಲ್ ತಂದೆ ಬಂಟ್ವಾಳ ತಾಲೂಕಿನ ಕುಮ್ಡೇಲು ನಿವಾಸಿ ಸೇಸಪ್ಪ ಬೆಳ್ಚಾಡ (68) ಅವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕುಮ್ಡೇಲು ಸೇಸಪ್ಪ ಬೆಳ್ಚಾಡ ಅ.17 ರಂದು ಶುಕ್ರವಾರ ನಿಧನಹೋಂದಿದರು. ಮೃತರು ಹಿಂದೂ ಮುಖಂಡ ಭರತ್ ಕುಮ್ಡೇಲು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರು ಪತ್ನಿ ,ಪತ್ರ ಭರತ್ ಕುಮ್ಡೇಲು ಮತ್ತು ಒರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ಸದ್ಯನ್ಯಾಯಾಂಗ ಬಂಧನದಲ್ಲಿರುವ ಭರತ್ ಕುಮ್ಡೇಲುನನ್ನು ನ್ಯಾಯಾಲಯದ ಅನುಮತಿ ಪಡೆದು ಪಿತೃವಿನ ಅಂತಿಮದರ್ಶನ ಮತ್ತು ಅಂತ್ಯಕ್ರಿಯೆಗಾಗಿ ಸಂಜೆಯ ವೇಳೆಗೆ ಬಿಗು ಪೊಲೀಸ್ ಭದ್ರತೆಯಲ್ಲಿ ಕರೆತರಲಾಗಿತ್ತು.
ಬೆಂಜನಪದವಿನ ಹಿಂದೂ ರುದ್ರ ಭೂಮಿಯಲ್ಲಿ ಪಿತೃವಿನ ಅಂತ್ಯಕ್ರಿಯ ಬಳಿಕ ಮತ್ತೆ ಭರತ್ ಕುಮ್ಡೇಲ್ ನನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಈ ಸಂದರ್ಭ ಭರತ್ ಮನೆ ಪರಿಸರದಿಂದ ಬೆಂಜನಪದವಿನವರೆಗೂ ಮುಂಜಾಗೃತಾಕ್ರಮವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.



