Published On: Tue, Oct 14th, 2025

 ಕಂಬಳಕ್ಕೆ ಸರಕಾರದಿಂದ ಮಾನ್ಯತೆ ದಿಟ್ಟ ಹೆಜ್ಜೆ: ಮಾಜಿ ಸಚಿವ ರೈ 

ಬಂಟ್ವಾಳ: ಈ ಹಿಂದೆ ಹಲವಾರು ಸಂಕಷ್ಟ ಮತ್ತು ಕಾನೂನು ತೊಡಕುಗಳನ್ನು ಎದುರಿಸುತ್ತಾ ಬಂದಿರುವ ಕಂಬಳ ಕ್ರೀಡೆಯು ಪ್ರಸಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕೈಗೊಂಡ ದಿಟ್ಟ ನಿರ್ಧಾರದಿಂದ ಕ್ರೀಡಾ ಮಾನ್ಯತೆ ದೊರೆತಿದ್ದು, ಮುಂಬರುವ ಬಜೆಟಿನಲ್ಲಿ ಹೆಚ್ಚಿನ ಅನುದಾನ ಗಿಟ್ಟಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. 

ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ಕೊಡಂಗೆ ಎಂಬಲ್ಲಿ ಭಾನುವಾರ ರಾತ್ರಿ ಸಮಾರೋಪಗೊಂಡ ಎರಡನೇ ವರ್ಷದ ‘ರೋಟರಿ ಕಂಬಳ’ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದೇ ವೇಳೆ ಪ್ರಗತಿಪರ ಕೃಷಿಕ ಸುರೇಶ ಬಳ್ನಾಡು, ಕಂಬಳದ ಸಾರಥ್ಯ ವಹಿಸಿದ್ದ ಮಾಜಿ ಸಹಾಯಕ ಗವರ್ನರ್ ಎಲ್ಯಾಸ್ ಸ್ಯಾಂಕ್ಟಿಸ್, ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ ಕಾರಂತ ಇವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಕಂಬಳ ಸಮಿತಿ ಗೌರವಾಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್ ಮಾತನಾಡಿ, ‘ಅವಿಭಜಿತ ಜಿಲ್ಲೆಯಲ್ಲಿ ನಡೆಯುವ ಕಂಬಳ ಕೂಟಗಳಿಂದ ಸರಕಾರಕ್ಕೆ ಪರೋಕ್ಷವಾಗಿ ಲಕ್ಷಾಂತರ ಮೊತ್ತದ ತೆರಿಗೆ ಸಂಗ್ರಹವಾಗುತ್ತಿದ್ದು, ಮುಂಬರುವ ಬಜೆಟಿನಲ್ಲಿ ಅನುದಾನ ಮೀಸಲಿಡುವುದರ ಜೊತೆಗೆ ಭವಿಷ್ಯದಲ್ಲಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಮಾದರಿ ಕಂಬಳ ನಡೆಯಬಹುದು ಎಂದರು.

 ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ಪಿ.ಆರ್.ಶೆಟ್ಟಿ ಕೂಳೂರು, ಜಿಲ್ಲಾ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ ಎಸ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಲೋಕೇಶ ಶೆಟ್ಟಿ ಮುಚ್ಚೂರು, ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ, ಡಾ.ದೇವದಾಸ್ ರೈ ಶುಭ ಹಾರೈಸಿದರು. ಸಹಾಯಕ ಗವರ್ನರ್ ಡಾ.ಜಯ ಕುಮಾರ್ ಶೆಟ್ಟಿ, ಕೆ.ಪದ್ಮನಾಭ ರೈ, ಉಮೇಶ್ ರಾವ್ ಮಿಜಾರು, ನಾರಾಯಣ ಹೆಗ್ಡೆ, ರಾಜಗೋಪಾಲ ರೈ, ಡಾ.ಆತ್ಮರಂಜನ್ ರೈ, ಜಯರಾಮ ರೈ, ಅಶ್ವನಿ ಕುಮಾರ್ ರೈ, ಡಾ.ಸೂರ್ಯನಾರಾಯಣ ಕುಕ್ಕಾಡಿ, ಡಾ.ಶಿವಪ್ರಸಾದ್, 

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್, ಮಾಜಿ ಅಧ್ಯಕ್ಷ ಎಂ.ಪದ್ಮರಾಜ ಬಲ್ಲಾಳ್, ಬಂಟ್ವಾಳ ಕ್ಲಬ್ ಅಧ್ಯಕ್ಷ ಬಸ್ತಿ ಮಾಧವ ಶೆಣೈ, ಕಾರ್ಯದರ್ಶಿ ಯಾಸೀರ್ ಕಲ್ಲಡ್ಕ, ಸಿದ್ಧಕಟ್ಟೆ ಫಲ್ಗುಣಿ ಕ್ಲಬ್ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಕಾರ್ಯದರ್ಶಿಟೀನಾ ಡಿಕೋಸ್ತ, ಮೊಡಂಕಾಪು ಕ್ಲಬ್ಬಿನ ಅಧ್ಯಕ್ಷೆ ಪ್ರೀಮಾ ವೈಲೆಟ್ ಫೆರ್ನಾಂಡಿಸ್, ಕಾರ್ಯದಶರ್ಿ ಪ್ರಸನ್ನ ರಾವ್, ಮಂಗಳೂರು ಸೆಂಟ್ರಲ್ ಕ್ಲಬ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ್ ಕೋಟ್ಯಾನ್, ವಲಯ ಸೇನಾನಿ ಬಿ.ಪ್ರಕಾಶ್ ಬಾಳಿಗಾ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಸುರೇಂದ್ರ ಬಿ.ಕಂಬಳಿ ಫರಂಗಿಪೇಟೆ, ರವಿ ಜಲಾನ್, ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ಬಂಟ್ವಾಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ವಾಮದಪದವು ವಲಯ ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಹರೇಕಳ ಕಂಬಳ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಸುಜಾತ ಪದ್ಮನಾಭ ರೈ, ಪ್ರಮುಖರಾದ ಶ್ರುತಿ ಮಾಡ್ತಾ, ಅಂಟೋನಿ ಸಿಕ್ವೇರ, ಅರುಣ್ ಶೆಟ್ಟಿ ಬಜ್ಪೆ, ರಾಜೇಶ ಶೆಟ್ಟಿ ಸೀತಾಳ, ಕಿರಣ್ ಕುಮಾರ್ ಮಂಜಿಲ, ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ರಾಜೇಶ ಶೆಟ್ಟಿ ಕೊನೆರೊಟ್ಟು, ಮೈಕೆಲ್ ಡಿಕೋಸ್ತ, ಜನಾರ್ದನ ಬಂಗೇರ ತಿಮರಡ್ಕ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ಶೇಖರ ಶೆಟ್ಟಿ ಬದ್ಯಾರು, ಜಿಲ್ಲಾ ತೀರ್ಪುಗಾರರಾದ ವಿಜಯ ಕುಮಾರ್ ಕಂಗಿನಮನೆ, ಎಡ್ತೂರು ರಾಜೀವ ಶೆಟ್ಟಿ, ಸ್ಥಳದಾನಿ ಚಂದ್ರಶೇಖರ್ ಕೊಡಂಗೆ, ಬ್ಯಾಂಕ್ ಮೆನೇಜರ್ ಸಂತೋಷ್ ಕುಮಾರ್ ಚೌಟ, ಪುಂಜಾಲಕಟ್ಟೆ ಠಾಣಾಧಿಕಾರಿ ರಾಜೇಶ್ ಮತ್ತಿತರರು ಇದ್ದರು.  

ಲೊರೆಟ್ಟೊ ಹಿಲ್ಸ್ ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಸ್ವಾಗತಿಸಿ, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು. ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಸುರೇಶ ಶೆಟ್ಟಿ ಸಿದ್ಧಕಟ್ಟೆ ಮತ್ತು ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter