ಕಲ್ಲಡ್ಕದಲ್ಲಿ ಆರ್ ಎಸ್ ಎಸ್ ಪಥ ಸಂಚಲನ
ಬಂಟ್ವಾಳ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಕಾರ್ಯಕ್ರಮದ ನಿಮಿತ್ತ ವಿಟ್ಲ ತಾಲೂಕು ಸ್ವಯಂಸೇವಕರಿಂದ ಕಲ್ಲಡ್ಕದಲ್ಲಿ ಪಥಸಂಚಲನ ನಡೆಯಿತು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಪನ್ನಗೊಂಡು ಕಲ್ಲಡ್ಕ ಪೇಟೆಯ ಮೂಲಕ ಬೋಳಂತೂರು ಕ್ರಾಸ್ ತನಕ ಸಾಗಿದ ಪಥಸಂಚಲನ ಬಳಿಕ ಅಲ್ಲಿಂದ ತಿರುವು ಪಡೆದು ಕಲ್ಲಡ್ಕ ಕೆ.ಸಿ.ರೋಡ್‌ನಲ್ಲಿ ತಿರುಗಿ ಶ್ರೀರಾಮ ವಿದ್ಯಾಕೇಂದ್ರಕ್ಕೆ ತಲುಪಿತು.
ವಿಟ್ಲ ತಾಲೂಕಿನ 13 ಮಂಡಲಗಳ 34 ಗ್ರಾಮಗಳಿಂದ 1512 ಸ್ವಯಂಸೇವಕರು ಈ ಪಥ ಸಂಚಲನದಲ್ಲಿ ಭಾಗವಹಿಸಿದರು.



