ಬಂಟ್ವಾಳ : ಬಂಟ್ವಾಳ ತಾಲೂಕಿನ ನರಿಕೊಂಬು  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್.ಎಮ್‌ ಪಿ .ಟಿ ಸಂಸ್ಥೆಯ ಸಿಎಸ್ಆರ್ ಅನುದಾನ  25 ಲಕ್ಷ ರೂ. ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಹಾಗೂ ಸ್ಥಳೀಯ ವಿದ್ಯಾಭಿಮಾನಿಗಳ ಸಹಕಾರದಲ್ಲಿ ನಿರ್ಮಾಣಗೊಳ್ಳಲಿರುವ ನೂತನ ಶಾಲಾ ಅಕ್ಷರ ದಾಸೋಹ ಮತ್ತು ಭೋಜನಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಶಾಲಾ ಹಿರಿಯ ವಿದ್ಯಾರ್ಥಿ ಪುರೋಹಿತರಾದ ಕೃಷ್ಣರಾಜ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ರವಿ ಅಂಚನ್  ಕಟ್ಟಡ ರಚನೆಯ ಗುತ್ತಿಗೆದಾರ  ಸಂದೀಪ್ ಶೆಟ್ಟಿ ಅರೆಬೆಟ್ಟು ರವರಿಗೆ ಕಟ್ಟಡ ನಿರ್ಮಾಣ ಕಾಮಗಾರಿಯ ಜವಾಬ್ದಾರಿ ಹಸ್ತಾಂತರಿಸಿದರು.

ಈ ಸಂದರ್ಭ ನರಿಕೊಂಬು ಗ್ರಾಮ ಪಂಚಾಯತ್  ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷೆ ಮೋಹಿನಿ ಸದಸ್ಯರಾದ ಪುರುಷೋತ್ತಮ್ ಟೈಲರ್,  ಕಿಶೋರ್ ಶೆಟ್ಟಿ,  ಉಷಾಲಾಕ್ಷಿ, ರಮನಾಥ್,  ಹೇಮಾವತಿ,  ಸವಿತಾ,  ಸುಜಾತ, ಪ್ರಮುಖರಾದ ಪ್ರೇಮನಾಥ್ ಶೆಟ್ಟಿ, ಮಾಧವ  ಕರ್ಬೆಟ್ಟು, ಮಹಮದ್ ಇಲಿಯಾಸ್,  ಸುರೇಶ್ ಕೋಟ್ಯಾನ್, ನಿವೃತ್ತ ಶಿಕ್ಷಕಿ  ದೇವಕಿ, ಅನಿತಾ ಲಸ್ರಾದೋ, ಮಾಜಿ ರೋಟರಿ  ಜಿಲ್ಲಾ ಗವರ್ನರ್  ಪ್ರಕಾಶ್ ಕಾರಂತ್,   ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಮೂರ್ತೆದಾರರ ಸೇವಾ ಸಹಕಾರಿ ಸಂಘ  ನರಿಕೊಂಬು ಅಧ್ಯಕ್ಷ  ಪುರುಷೋತ್ತಮ ಸಾಲ್ಯಾನ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ  ಲಕ್ಷ್ಮಿ ಪ್ರಕಾಶ್,  ಸದಸ್ಯರಾದ  ದಾಮೋದರ್,  ಕೇಶವ, ಕಮಲಾಕ್ಷ, ಜಯ ಪ್ರಕಾಶ್,  ಪ್ರಮೋದ,  ನವೀನ್,  ಶಶಿಕಲಾ, ಪ್ರಿಯಾ,  ಮೀನಾಕ್ಷಿ,ಮಾಜಿ ಸದಸ್ಯರಾದ   ಸತೀಶ್,  ಪ್ರಸಾದ್,  ಗೋಪಾಲಕೃಷ್ಣ,  ವೀಣಾ, ತಾಯಂದಿರ ಸಮಿತಿಯ ಉಪಾಧ್ಯಕ್ಷ  ರೇಖಾ, ಸದಸ್ಯ ಅಮಿತಾ, ನರಿಕೊಂಬಿನ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ  ಚಂದ್ರಹಾಸ,  ಕೃಷ್ಣಪ್ಪ,   ಶಾಲಾ ಶಿಕ್ಷಕರು, ತಾಯಂದಿರ ಸಮಿತಿಯ ಸದಸ್ಯರುಗಳು, ಮಕ್ಕಳ  ಪೋಷಕರು,  ಶಾಲಾಭಿಮಾನಿಗಳು ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *