ಬಂಟ್ವಾಳ: ಮಂಗಳೂರಿನಿಂದ ಪೊಳಲಿಗೆ  ತಾರಿಗುಡ್ಡೆ-ಬೊಂಡಂತಿಲ ಮಾರ್ಗವಾಗಿ ಕೆಸ್ ಆರ್ ಟಿಸಿ ನಗರ ಸಾರಿಗೆಯ ಬಸ್ ಸಂಚಾರಕ್ಕೆ ಪೊಳಲಿ ಶ್ರೀರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.
ಕೆಎಸ್ ಆರ್ ಟಿಸಿಯ ಮಂಗಳೂರು-3ನೇ ಘಟಕದಿಂದ ಈ ಹೊಸ ನಗರ ಸಾರಿಗೆಯನ್ನು ಕಲ್ಪಿಸಲಾಗಿದ್ದು,ಈ ಬಸ್ ಮಂಗಳೂರಿನಿಂದ ಗುರುಪುರ-ವಾಮಂಜೂರು-ತಾರಿಗುಡ್ಡೆ ಬೊಂಡಂತಿಲ ,ಮಲ್ಲೂರು,ಕಲಾಯಿ, ಅಮ್ಮುಂಜೆ ,ಬಡಕಬೈಲ್ ಮಾರ್ಗವಾಗಿ ಪೊಳಲಿಯತ್ತ ಕಾರ್ಯಾಚರಣೆ ಮಾಡಲಿದೆ.


ಬಂಟ್ವಾಳ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಅವರು ಈ ಸಾರಿಗೆ ವ್ಯವಸ್ಥೆಯನ್ನು ಉದ್ಘಾಟಿಸಿದರು.

ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,ಕರಿಯಂಗಳ ಗ್ರಾ.ಪಂ.ಅಧ್ಯಕ್ಷ ರಾಧಲೋಕೇಶ್,ಉಪಾಧ್ಯಕ್ಷ ರಾಜು ಕೋಟ್ಯಾನ್,ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ,ಕೆಎಸ್ ಆರ್ ಟಿಸಿ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಈ ರೂಟಿನಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಇದ್ದ ಹಲವು ಸಮಯದ ಬೇಡಿಕೆ ಇದೀಗ ಈಡೇರಿದ್ದು, ಈ ಭಾಗದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.  

By suddi9

Leave a Reply

Your email address will not be published. Required fields are marked *