ಬಂಟ್ವಾಳ: ನಾಗರಾಜ್ ಕಲ್ಲಡ್ಕ ನೇತೃತ್ವದ ನಾಗಸುಜ್ಞಾನ ಫ್ರೆಂಡ್ಸ್ ಕಲ್ಲಡ್ಕ ವತಿಯಿಂದ ಯಶಸ್ವಿ ಏಳನೇ ವರ್ಷದ  “ಕಲ್ಲಡ್ಕ  ಪಿಲಿ -2025” ಹಾಗೂ ಅಂಬುಲೆನ್ಸ್ ಲೋಕರ್ಪಣೆ,ಕಲ್ಲಡ್ಕ ಪರಿಸರದ ಕಾರ್ಯನಿರ್ವಹಿಸುತ್ತಿರುವ  ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮಕಲ್ಲಡ್ಕ ಶ್ರೀರಾಮ ಭಜನಾ ಮಂದಿರದ ರಾಮಾಂಗಣದಲ್ಲಿ ನಡೆಯಿತು.


ಕಲ್ಲಡ್ಕ ಲಕ್ಷ್ಮಿ ಗಣೇಶ್  ಹೋಟೆಲ್ ಮಾಲಕರಾದ ಎನ್. ರಾಜೇಂದ್ರ ಹೊಳ್ಳ ಅವರು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್  ಕಲ್ಲಡ್ಕ ಅವರು ಅತಿಥಿಯಾಗಿ ಭಾಗವಹಿಸಿ, ಕಲ್ಲಡ್ಕ ಪರಿಸರದಲ್ಲಿ  ಸೇವೆ ನೀಡುತ್ತಿರುವ ವೈದ್ಯರುಗಳನ್ನು  ಗೌರವಿಸಿ ಮಾತನಾಡಿ, ಕಲ್ಲಡ್ಕ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ  ಎಲ್ಲಾ ವೈದ್ಯಾಧಿಕಾರಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸಿ ಅವರ ಸಮ್ಮುಖದಲ್ಲಿ  ಜನರಿಗೆ ತುರ್ತು ಅಗತ್ಯ ಇರುವಂತಹ   ‘ನಿತ್ಯರಕ್ಷಾ ಆಂಬುಲೆನ್ಸ್” ಸೇವಾರ್ಪಣೆ ಮಾಡುವಂತ ನಾಗ ಸುಜ್ಞಾನ  ಫ್ರೆಂಡ್ಸ್  ಕಲ್ಪನೆ ಪ್ರಸಂಶನೀಯವಾದದ್ದು, ಧರ್ಮ ಕಾರ್ಯ ನಿರ್ಭಯವಾಗಿ ನಿತ್ಯ ನಿರಂತರ ನಡೆಯಲಿ ಎಂದರು.


ಇದೇ ವೇಳೆ ಅಂಬುಲೆನ್ಸ್ ವಾಹನದ ಜವಾಬ್ದಾರಿಯನ್ನು ವಹಿಸಿಕೊಂಡ   ಮಿಥುನ್ ಪೂಜಾರಿ ಯವರಿಗೆ ವಾಹನದ ಕೀಲಿಕೈಯನ್ನು ಅವರು  ಹಸ್ತಾಂತರಿಸಿದರು.ಸಾಂಪ್ರದಾಯಿಕ ದಸರಾ ಹುಲಿಗಳ ಊದು ಪೂಜೆ ನಡೆಯಿತು.

ವೇದಿಕೆಯಲ್ಲಿ ಡಾ. ಕಮಲ ಪ್ರಭಾಕರ್ ಭಟ್, ಡಾ. ರೇಷ್ಮಾ ಉಳ್ಳಾಲ್, ಡಾ. ಎಚ್ ರಾಜೀವ ಶೆಟ್ಟಿ, ಡಾ.ಚಂದ್ರಶೇಖರ್, ಡಾ. ಶೈಲೇಂದ್ರ ಎಸ್ ಎಸ್, ಡಾ. ರವಿಕಿರಣ್, ಡಾ. ಮನೋಜ್, ಡಾ. ಕೆ.ಆರ್ .ಎಸ್ ಕಿನಿಲಾ, ಡಾ ಸುಕೇಶ್ ಕಲ್ಲಡ್ಕ, ಡಾ. ಪ್ರಶಾಂತ್ ಕುಮಾರ್ ಕಲ್ಲಡ್ಕ, ನ್ಯಾಯವಾದಿ ಅರುಣ್ ಶ್ಯಾಮ್, ಗಣಪತಿ ಸ್ವಾಮೀಜಿ,ಚೆನ್ನಪ್ಪ ಆರ್ .ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.


ಕಲಾಮಯಂ ಉಡುಪಿ ಅವರಿಂದ  ಜಾನಪದ ಕಲರವ  ಸಾಂಸ್ಕೃತಿಕ ಕಾರ್ಯಕ್ರಮ, ವೈವಾಹಿಕ ಜೀವನದಲ್ಲಿ ಮೂರು ದಶಕ ಪೂರೈಸಿದ ದಂಪತಿಗಳ ಸಂಗಮ  “ನಿತ್ಯದಂಪತಿ” ಕಾರ್ಯಕ್ರಮ, 1ರಿಂದ 9 ವರ್ಷ ದ ಮಕ್ಕಳಿಗೆ “ಬಾಲಭೋಜನ” ಕಾರ್ಯಕ್ರಮ ಜರಗಿತು.

ನಾಗ ಸುಜ್ಞಾನ  ಫ್ರೆಂಡ್ಸ್ ನ ಮುಖ್ಯಸ್ಥರಾದ  ನಾಗರಾಜ್ ಕಲ್ಲಡ್ಕ  ಸ್ವಾಗತಿಸಿ, ಪ್ರದೀಪ್ ಕೆಂಪುಗುಡ್ಡೆ ವಂದಿಸಿದರು. ಕುಮಾರ್ ವಿಟ್ಲ ಹಾಗೂ ಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *