ಬಂಟ್ವಾಳ: ವೀರಕಂಭ ಗ್ರಾಮ ಅರಣ್ಯ ಸಮಿತಿಯ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ  ಕೆಲಿಂಜ ಶ್ರೀನಿಕೇತನ ಸಭಾಂಗಣದಲ್ಲಿ ನಡೆಯಿತು.

ವೀರಕಂಭ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ವಿಶ್ವನಾಥ ಎಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮ ಅರಣ್ಯ ಸಮಿತಿಯ ಸದಸ್ಯರ ಸಂಖ್ಯೆ ಹೆಚ್ಚಿಸಿ, ಅರಣ್ಯ ರಕ್ಷಣೆಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಬೇಕು ಎಂದರು.

ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನಿಲ್ ಜೆ.ಬಿ ಡಿಸೋಜ ಮಾತನಾಡಿ, ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಗ್ರಾಮ ಅರಣ್ಯ ಸಮಿತಿ ಮುತುವರ್ಜಿ ವಹಿಸಿ ಅರಣ್ಯ ರಕ್ಷಿಸುವ ಕಾರ್ಯದಲ್ಲಿ ಮುಂದಾಗಬೇಕಲ್ಲದೆ ಪರಿಸರ ದಿನದಂದು ಪ್ರತಿಯೊಬ್ಬ ಸದಸ್ಯರು ಗಿಡ ನೆಟ್ಟು ಪೋಷಿಸಬೇಕು ಎಂದರು.

ಉಪವಲಯ ಅರಣ್ಯಾಧಿಕಾರಿ, ವೀರಕಂಭ ಗ್ರಾಮ ಅರಣ್ಯ ಸಮಿತಿ ಕಾರ್ಯದರ್ಶಿ ರವಿರಾಜ್ ಬಿ.  ವರದಿ ವಾಚಿಸಿದರು.  ಗ್ರಾಮ ಪಂಚಾಯತ್ ಸದಸ್ಯ ಜಯ ಪ್ರಸಾದ್ ಶೆಟ್ಟಿ, ಹಿಂದೂ ಧಾರ್ಮಿಕ ಸೇವಾ ಸಮಿತಿಯ ಅಧ್ಯಕ್ಷ ಕೊರಗಪ್ಪ ಗೌಡ ಅಡ್ಯೆಯಿ,
ಕಾರ್ಯನಿರ್ವಹಣಾ ಸಮಿತಿಯ ಸದಸ್ಯರಾದ ನೋಣಯ್ಯ ಎಂ. ಆರ್,  ಅಬ್ದುಲ್ ಖಾದರ್,  ಬೇಬಿ ಆಳ್ವಾ, ಮೀನಾಕ್ಷಿ,  ಗಸ್ತು ಅರಣ್ಯಪಾಲಕರಾದ ಶೋಭಿತ್ ಕುಮಾರ್, ದಯಾನಂದ್, ರಾಘವೇಂದ್ರ ಹಾಗೂ ಅರಣ್ಯ ವೀಕ್ಷಕರಾದ ಕಿರಣ್  ಮತ್ತು ಪ್ರವೀಣ ಹಾಗೂ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ತೇಜಸ್ವಿ ಸ್ವಾಗತಿಸಿ, ಶಶಿಕಲಾ ವಂದಿಸಿದರು ನೀಡಿದರು. ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *