ಬಂಟ್ವಾಳ:  ತಾಲೂಕಿನ ಬಾಲ್ತಿಲ ಗ್ರಾಮದ ಕುದ್ರೆಬೆಟ್ಟು ಅಂಗನವಾಡಿಯಲ್ಲಿ ಅಕ್ಷರದೀಪ ಹಿರಿಯ ವಿದ್ಯಾರ್ಥಿ ಸಂಘವನ್ನು  ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುಂದರ ಸಾಲಿಯನ್  ಉದ್ಘಾಟಿಸಿದರು.

ಅಂಗನವಾಡಿ ಶಿಕ್ಷಕಿ ಸುರೇಖಾ, ಸಹಾಯಕಿ ಜಯಂತಿ, ಆಶಾ ಕಾರ್ಯಕರ್ತೆ ಸುಜಾತ ಎಂ  ಬಾಲ ವಿಕಾಸ ಸಮಿತಿಯ ಅಧ್ಯಕ್ಷರಾದ ಸುಜಾತ ಗಿರೀಶ್ ಧರ್ಮದ ಬಳ್ಳಿ ಇವರ ಉಪಸ್ಥಿತಿಯಲ್ಲಿ ಎರಡು ವರ್ಷದ ಅವಧಿಗೆ ನೂತನ  ಸಮಿತಿಯನ್ನು ಪ್ರಕಟಿಸಲಾಯಿತು.

ಅಧ್ಯಕ್ಷರಾಗಿ ಹೇಮಂತ್ ಕುಮಾರ್ ಬೊಲ್ಪೊಡಿ, ಉಪಾಧ್ಯಕ್ಷರಾಗಿ ಸತೀಶ್ ಮೇಸ್ತ್ರಿ, ಕಾರ್ಯದರ್ಶಿಯಾಗಿ ರಂಜಿತ್ ಪುರ್ಲಿ ಪಾಡಿ, ಕೋಶಾಧಿಕಾರಿಯಾಗಿ ಅಮಿತಾ ಎಲ್ತಿಮಾರ್, ಜೊತೆ ಕಾರ್ಯದರ್ಶಿಯಾಗಿ ನವೀನ್ ಮಪಲ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ  ಕುಧ್ರೆಬೆಟ್ಟು ಶಾಲಾ ಮಾಜಿ ಶಾಲಾಭಿವೃದ್ಧಿ ಸಮಿತಿಯ  ಅಧ್ಯಕ್ಷರಾದ ರಮೇಶ್ ಕುದ್ರೆಬೆಟ್ಟು, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಿವರಾಜ್,  ಹಾಗೂ ಲೋಕೇಶ್ ಬೈಲು ಮಾದವ ಸಾಲಿಯನ್  ಪ್ರಶಾಂತ್, ಇನ್ನಿತರು ಉಪಸ್ಥಿತರಿದ್ದರು. 

By suddi9

Leave a Reply

Your email address will not be published. Required fields are marked *