ಬಂಟ್ವಾಳ: ಕೃಷಿ ಇಲಾಖೆ ಬಂಟ್ವಾಳ ಹಾಗೂ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘ ಪುಂಜಾಲಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಪಿಲಾತಬೆಟ್ಟು ಕೃಷಿ ಪತ್ತಿನ ಸಹಕಾರಿ ಸಂಘದ ಸುವಿಧಾ ಸಭಾಂಗಣದಲ್ಲಿ ರೈತರಿಗಾಗಿ ವಿಟ್ಲದ ಸಿಪಿಸಿಆರ್‌ಐ ತಜ್ಞರಿಂದ ಕೃಷಿ, ತೋಟಗಾರಿಕೆ ಇಲಾಖಾ ಸೌಲಭ್ಯ ಮಾಹಿತಿ ಕಾರ್ಯಗಾರ ನಡೆಯಿತು.

ಪಿಲಾತಬೆಟ್ಟು ಕೃ.ಪ. ಸ. ಸಂಘದ ಅಧ್ಯಕ್ಷರಾದ ಯಂ. ತುಂಗಪ್ಪ ಬಂಗೇರ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ,ರೈತರು ಬೆಳೆದ ಬೆಳೆಯನ್ನು ರಕ್ಷಿಸುವ ಮತ್ತು ಅಧಿಕ ಇಳುವರಿಯನ್ನು ಪಡೆಯಲು ಉಪಯುಕ್ತವಾದ ಕಾರ್ಯಾಗಾರದ ಮಾಹಿತಿಗಳ ಸದುಪಯೋಗವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.
ವಿಟ್ಲಸಿಪಿಸಿಆರ್ ಐ ನ ಕೀಟ ಶಾಸ್ತ್ರಜ್ಞರಾದ ಡಾ| ಮಧುರವರು ರೋಗಗಳಿಂದ ಬೆಳೆಯನ್ನು ರಕ್ಷಿಸುವ ವಿಧಾನ ರೋಗಕಾರವಾದ ಅಂಶಗಳ ಬಗ್ಗೆ ಮಾಹಿತಿ ನೀಡಿದರು.ಬಂಟ್ವಾಳಸಹಾಯಕ ಕೃಷಿ ನಿರ್ದೇಶಕರಾದ ವೀಣಾ ಕೆ.ಆರ್.,ಬಂಟ್ವಾಳ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪ್ರದೀಪ್ ಡಿ’ಸೋಜ ಅವರು ತಮ್ಮ ಇಲಾಖೆಯಿಂದ ಸಿಗುವ ಸವಲತ್ತಿನ ಮಾಹಿತಿ ನೀಡಿದರೆ,ವಿಶ್ರುತ್ ಆಗ್ರೋ ಇಂಡಸ್ಟ್ರೀಸ್ ಸಿಇಒ ಗಣೇಶ್ ಆಗ್ರೋ ಸಾವಯವ ಗೊಬ್ಬರದ ಬಗ್ಗೆ ಮಾಹಿತಿ ನೀಡಿದರು.
ಪಿಲಾತಬೆಟ್ಟು ಗ್ರಾ. ಪಂ.ಅಧ್ಯಕ್ಷೆ ಶಾರದಾ, ಸಹಕಾರಿ ಸಂಘದ ನಿರ್ದೇಶಕರು, ಪಂಚಾಯತ್ ಸದಸ್ಯರು ಮತ್ತು ಮಾಜಿ ಅಧ್ಯಕ್ಷರುಗಳು, ಹಾಲು ಉತ್ಪಾದಕ ಸ. ಸಂಘದ ಅಧ್ಯಕ್ಷರು, ಬೆಳಕು ಸಂಜೀವಿನಿ ಒಕ್ಕೂಟದ ಸಖಿಯರು ಮತ್ತು ರೈತರು ಉಪಸ್ಥಿತರಿದ್ದರು.
ಬಂಟ್ವಾಳ ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿಗಳಾದ ನಂದನ್ ಶೆಣೈ ಪ್ರಸ್ತಾವನೆಗೈದರು. ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಬಬಿತಾ ದಿನೇಶ್ ಸ್ವಾಗತಿಸಿದರು, ಕೃಷಿ ಇಲಾಖಾ ತಾಂತ್ರಿಕ ವ್ಯವಸ್ಥಾಪಕಿ ಕು| ದೀಕ್ಷಾ ವಂದಿಸಿದರು.ಸಂಘದ ನಿರ್ದೇಶಕ ಪ್ರಭಾಕರ ಪಿ.ಯಂ. ಕಾರ್ಯಕ್ರಮ ನಿರೂಪಿಸಿದರು.
