ಬಂಟ್ವಾಳ:ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಇದೇ 22ರಿಂದ ಮನೆ ಮನೆ ಭೇಟಿ ಮೂಲಕ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ವೇಳೆ ಧರ್ಮದ ಕಾಲಂ ನಲ್ಲಿ ಹಿಂದೂ ಮತ್ತು ಜಾತಿ ಕಾಲಂ ನಲ್ಲಿ ‘ಗಾಣಿಗ’ ಎಂದೇ ನಮೂದಿಸಬೇಕು.

ಉಪ ಜಾತಿ ಕಾಲಂ ನಲ್ಲಿ ‘ಸಪಳಿಗ’ ಹಾಗೂ ಜಾತಿ ಪ್ರವರ್ಗ ಕಾಲಂ ನಲ್ಲಿ ‘ಒಬಿಸಿ’ ಎಂದು ನಮೂದಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಪಳಿಗ, ಉಡುಪಿ ಜಿಲ್ಲೆಯಲ್ಲಿ ಸೋಮ ಕ್ಷತ್ರಿಯ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಪಾಟಾಳಿ ಎಂಬ ಉಪ ಜಾತಿಗಳಿವೆ ಎಂದು ಮುಂಬೈ ಗಾಣಿಗ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ.ಸಪಲ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *