ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ೨೪ನೇ ವರ್ಷದ ನವದಂಪತಿ ಸಮಾವೇಶ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ನವದಂಪತಿಗಳನ್ನು ಪಾದ ತೊಳೆದು ಸ್ವಾಗತಿಸಿ, ಅಗ್ನಿ ಕುಂಡಕ್ಕೆ, ಅರ್ಘ್ಯ ಅರ್ಪಿಸಿ ದಂಪತಿಗಳನ್ನು ವೇದಘೋಷದೊಂದಿಗೆ  ಸಭಾಂಗಣಕ್ಕೆ ಕರೆತರಲಾಯಿತು.

ಹಿರಿಯ ದಂಪತಿಗಳಾದ ಹಿಂದೂ ಜಾಗರಣ ವೇದಿಕೆಯ ಸುಳ್ಯ ಪ್ರಖಂಡದ ತಾಲೂಕು ಸಂಚಾಲಕರಾದ  ಎನ್. ಎ ರಾಮಚಂದ್ರ ಮತ್ತು  ಡಾ| ಯಶೋಧ ಅವರು ಪ್ರಭು ಶ್ರೀರಾಮನ ಮೂರ್ತಿಗೆ ಕ್ಷೀರಾಭಿಷೇಕಗೈದು ಪುಷ್ಪಾರ್ಚನೆಗೈಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಜೀವನಾನುಭವವನ್ನು ಹಂಚಿಕೊಂಡರು. 

 ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮ ಸಂಸ್ಕೃತಿಯ ಕೇಂದ್ರ ಬಿಂದು ನಮ್ಮ ಮನೆ,ನಮ್ಮ ಕುಟುಂಬವನ್ನು ನಾವು ರಕ್ಷಣೆ ಮಾಡಬೇಕು. ಹಿಂದೂ ಸಮಾಜ  ಉಳಿದಿರುವುದು ಪರಸ್ಪರ ತಿಳುವಳಿಕೆ,ನಂಬಿಕೆಯಾಧರಾದಿಂದ ಎಂದರು. 

 ಅತಿಥಿಯಾಗಿ ಭಾಗವಹಿಸಿದ್ದ ಕುಟುಂಬ ಪ್ರಭೋಧನ ಪ್ರಮುಖರಾದ ಗಜಾನನ ಪೈ  ಅವರು ನಾವು ಧರ್ಮದ ರೀತಿಯಲ್ಲಿ ನಡೆಯುವಂತಹ ಪ್ರಜೆಗಳು ನಮ್ಮದು ಸನಾತನ ಸಂಸ್ಕೃತಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದಿದ್ದು, ಅದಕ್ಕೆ ಬೇಕಾದಂತಹ ಸಂಸ್ಕಾರ ಕೊಡಬೇಕು ಎಂದರು‌.

ಸಮಾರೋಪ ಸಮಾರಂಭದಲ್ಲಿರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಸು.ರಾಮಣ್ಣ ಅವರು ಸಮಾರೋಪ ಭಾಷಣಗೈದು, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ, ಸಂಸಾರ ಪಥದಲ್ಲಿ ಸಾಗುವಾಗ ದಂಪತಿಗಳಲ್ಲಿ ತಾಳ್ಮೆ, ಹೊಂದಾಣಿಕೆ, ಪರಸ್ಪರ ಅರ್ಥೈಸಿಕೊಳ್ಳುವುದು ತುಂಬಾ ಅಗತ್ಯವೆಂದು ಮಾರ್ಗದರ್ಶನಗೈದರು.

 ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ  ವಸಂತ ಮಾಧವ, ಸಹಸಂಚಲಕರಾದ ರಮೇಶ್ ಎನ್, ಡಾ| ಕಮಲಾ ಭಟ್ ಕಲ್ಲಡ್ಕ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಒಟ್ಟು ೯೭ ಜೋಡಿ ದಂಪತಿಗಳು ಭಾಗವಹಿಸಿದ್ದರು. ಲಾವಣ್ಯ ಸ್ವಾಗತಿಸಿ, ಗಾಯತ್ರಿ ಪ್ರಾರ್ಥಿಸಿದರು.  ಗುರುಪ್ರಿಯ ವೈಯಕ್ತಿಕ ಗೀತೆ ಹಾಡಿದರು. ಮೇಘಶ್ರೀ ವಂದಿಸಿದರು,  ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *