ಬಂಟ್ವಾಳ : ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಬಂಟ್ವಾಳ ಭೂ ಬ್ಯಾಂಕ್)ನ 2025 ಮೇ.27 ರವರೆಗಿನ ಆಡಳಿತಾವಧಿಯಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಲ್ಲಾದ ರಾಜಕೀಯ ಸ್ಥಿತ್ಯಂತರದ ಬಳಿಕ ರಾಜಕೀಯ ಒತ್ತಡಕ್ಕೆ ಮಣಿದು ದ.ಕ.ಜಿಲ್ಲಾ ಸಹಕಾರಿ ನಿಬಂಧಕರು ನಮ್ಮ ಆಡಳಿತ ಮಂಡಳಿಯನ್ನು ಅನರ್ಹಗೊಳಿಸಿದ್ದಾರೆ ಎಂದು ಅಧ್ಯಕ್ಷ ಅರುಣ್ ರೋಶನ್ ಡಿಸೋಜ ಸ್ಪಷ್ಟಪಡಿಸಿದ್ದಾರೆ.

ಗುರುವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು,ಜಿಲ್ಲಾ ಸಹಕಾರಿ ನಿಬಂಧಕರ ಈ ಆದೇಶವನ್ನು ಮೈಸೂರು ಪ್ರಾಂತ್ಯದ ಜಂಟಿ ನಿಬಂಧಕರಲ್ಲಿ ಪ್ರಶ್ನಿಸಲಾಗಿದ್ದು,, ಈ ಮೇಲ್ಮನವಿ ತನಿಖೆಗೆ ಬಾಕಿರುವಾಗಲೇ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ಪಿಟೀಷನ್ ಗೆ ಹೊರಡಿಸಿರುವ ಆದೇಶದನ್ವಯ 10 ಸದಸ್ಯರಗಳಾದ ಅರುಣ್ ರೋಶನ್ ಡಿಸೋಜ, ಸಂಜೀವ ಪೂಜಾರಿ, ಚಂದ್ರಶೇಖರ ಬಂಗೇರ, ರಾಜೇಶ್ ಬಿ. ಚಂದ್ರಹಾಸ ಕರ್ಕೆರಾ, ಸುಂದರ ಪೂಜಾರಿ, ಅಂಗಪ್ಪ ಪೂಜಾರಿ, ವಿಜಯಾನಂದ, ಲೋಲಾಕ್ಷಿ ಶೆಟ್ಟಿ ಮತ್ತು ಲತಾ ಎಂಬವರ ಅನರ್ಹತೆಯನ್ನು ಅಮಾನತುಗೊಳಿಸಿ ವಿಚಾರಣೆ ನಡೆಸಲು ಜಂಟಿ ಸಹಕಾರಿ ನಿಬಂಧಕರಿಗೆ ನಿರ್ದೇಶಿಸಿದೆ ಎಂದರು.
ಪ್ರಸ್ತುತ ಜಿಲ್ಲಾ ಸಹಕಾರಿ ನಿಬಂಧಕರು ಸಂಸ್ಥೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆಡಳಿತ ಮಂಡಳಿಯ ಅವಧಿಯು ಮುಗಿದಿರುವ ಹಿನ್ನಲೆಯಲ್ಲಿ ಕೂಡಲೇ ಪರಿಷ್ಕೃತ ಅರ್ಹ ಮತದಾರರ ಪಟ್ಟಿಯನ್ನು ತಯಾರಿಸಿ ಚುನಾವಣೆ ನಡೆಸಲು ನ್ಯಾಯಾಲಯ ಆಡಳಿತಾಧಿಕಾರಿಗೆ ನಿರ್ದೇಶಿಸಿದೆ. ಅದರನ್ವಯ ಸಹಕಾರಿ ನಿಬಂಧಕರು ತಕ್ಷಣ ಪರಿಷ್ಕೃತ ಆರ್ಹ ಮತದಾರರ ಪಟ್ಟಿಯನ್ನು ತಯಾರಿಸಿ ಚುನಾವಣೆ ನಡೆಸಲು ಮಂದಾಗಬೇಕು ಎಂದು ಅವರು ಈ ಮೂಲಕ ಒತ್ತಾಯಿಸಿದ್ದಾರು.
ಬ್ಯಾಂಕಿನ ಹಿತದೃಷ್ಠಿಯಿಂದ 6 ಮಂದಿ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಿದ್ದು, ಕಾನೂನಾತ್ಮಕವಾಗಿ ಇದು ಸರಿಯಲ್ಲದಿದ್ದರೂ, ಈ ಹಿಂದಿನಿಂದಲೂ ಮಾತ್ರವಲ್ಲ ದೂರುದಾರರ ಕಾಲದಲ್ಲಿಯು ಸಿಬ್ಬಂದಿಗಳ ನೇಮಕಾತಿ ನಡೆದಿದೆ. ಉಳಿದಂತೆ ಪ್ರಾಧಿಕಾರ ನಡೆಸಿದ ವಿಚಾರಣೆಯಲ್ಲಿಯು ಕೇವಲ ಆಡಳಿತಾತ್ಮಕ ಲೋಪಗಳ ಹೊರತು ಯಾವುದೇ ನಮ್ಮ ಅಧಿಕಾರಾವಧಿಯಲ್ಲಿ ಅಕ್ರಮಗಳು ಕಂಡುಬಂದಿಲ್ಲ ಎಂದು ಸಹಾಯಕ ನಿಬಂಧಕರ ವಿಚಾರಣೆಯಲ್ಲಿ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾವಳಮೂಡೂರು ವ್ಯ.ಸೇ.ಸ.ಸಂಘದಲ್ಲಿ ನಡೆದಿದೆಯೆನ್ನಲಾದ ಅವ್ಯವಹಾರ ಕುರಿತು ನಡೆಸಿದ ವಿಚಾರಣೆಯ ಬಳಿಕ ಜಿಲ್ಲಾ ಸಹಕಾರಿ ನಿಬಂಧಕರು ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದ್ದರೆ. ಬಂಟ್ವಾಳ ಭೂಬ್ಯಾಂಕ್ ನ ದೂರಿನ ಕುರಿತು ನಡೆಸಿದ ಒಂದೇ ಮಾದರಿಯ ವಿಚಾರಣೆಯ ಬಳಿಕ ಆಡಳಿತಮಂಡಳಿಯನ್ನು ಅನರ್ಹಗೊಳಿಸಿ ಆದೇಶಿಸಿದ್ದಾರೆ.ಈ ಎರಡು ಆದೇಶಗಳು ಸಹಕಾರಿ ರಂಗದಲ್ಲಿ ರಾಜಕೀಯ ಹಸ್ತಕ್ಷೇಪ ಯಾವರೀತಿ ನಡೆಯುತ್ತಿದೆ ಎಂಬುದಕ್ಕೆ ಸ್ಷಪ್ಟ ಉದಾಹರಣೆಯಾಗಿದೆ ಎಂದರು.
40.06 ಲಕ್ಷ ಲಾಭ:
ಬಂಟ್ವಾಳ ಪಿಎಲ್‌ಡಿ ಬ್ಯಾಂಕ್) 2024-25 ರ ಸಾಲಿನಲ್ಲಿ 39.02 ಕೋ.ರೂ. ವ್ಯವಹಾರ ನಡೆಸಿ,40.06 ಲಕ್ಷ ಲಾಭ ಗಳಿಸಿದೆ,ಸಂಘದ ಸದಸ್ಯರಿಗೆ ಸಂಭವನೀಯವಾಗಿ ಶೇ .7 ಡಿವಿಡೆಂಡ್ ವಿತರಿಸಲಿದೆ ಎಂದು ಇದೇ ವೇಳೆ ಅಧ್ಯಕ್ಷ ಅರುಣ್ ರೋಶನ್ ಡಿಸೋಜ ತಿಳಿಸಿದರು.
ಸಂಸ್ಥೆಯು188.09 ಲ.ರೂ. ಪಾಲು ಬಂಡವಾಳ,2025 ಮಾಚ್೯ ಅಂತ್ಯಕ್ಕೆ 53.59 ಲ.ರೂ. ಕ್ಷೇಮ ನಿಧಿ ಮತ್ತು 177.89 ಲ. ರೂ.ಇತರ ನಿಧಿ ಹಾಗೂ1902.52 ಲ.ರೂ ಠೇವಣಿಯನ್ನು ಹೊಂದಿರುತ್ತದೆ ಎಂದ ಅವರು ಕ. ರಾ. ಸ. ಕೃ. ಮತ್ತು ಗ್ರಾ. ಅ. ಬ್ಯಾಂಕ್ ನಿಂದ ಪಡೆದ ಸಾಲ ಹೊರಬಾಕಿ 1181.32 ಲಕ್ಷ ಆಗಿದ್ದು 2025 ಮಾಚ್೯ ಅಂತ್ಯ ಕ್ಕೆ ಸಂದಾಯವಾಗಬೇಕಿದ್ದ ಕ.ರಾ.ಸ. ಮತ್ತು ಗ್ರಾ.ಅ ಬ್ಯಾಂಕಿನ ತಗಾದೆಯನ್ನು ಸಂಪೂರ್ಣ ಮರುಪಾವತಿಸಲಾಗಿದೆ ಎಂದು ವಿವರಿಸಿದರು.
2024-25 ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ 1541.44 ಲಕ್ಷ ಸಾಲ ವಿತರಿಸಲಾಗಿದ್ದು, ಪ್ರಸ್ತುತ 90.74% ಸಾಲ ವಸೂಲಾತಿ ಸಾಧನೆ ಮಾಡಿ, ಬಂಟ್ವಾಳ ಭೂ ಬ್ಯಾಂಕ್ ದ. ಕ. ಜಿಲ್ಲೆಯಲ್ಲೇ ಸಾಲ ವಸೂಲಾತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು.ನಿರಂತರ 4 ವರ್ಷಗಳಲ್ಲಿ ಕ. ರಾ. ಸ. ಕೃ. ಮತ್ತು ಗ್ರಾ. ಅ. ಬ್ಯಾಂಕಿನಿಂದ ರಾಜ್ಯಮಟ್ಟದಲ್ಲಿ ಉತ್ತಮ ವಸೂಲಾತಿ ಸಾಧನೆಗಾಗಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದ ಪ್ರಶಸ್ತಿ ಪಡೆದಿದೆ ಎಂದು ಅವರು ತಿಳಿಸಿದರು.
2019-29 ನಷ್ಟದಲ್ಲಿದ್ದ ಸಂಸ್ಥೆಯನ್ನು ಬಿಜೆಪಿ ಬೆಂಬಲಿತ ನಮ್ಮ ಆಡಳಿತ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸದಸ್ಯರ,ರೈತ ಬಾಂಧವರ ಸಹಕಾರದಲ್ಲಿ ಲಾಭದತ್ತ ಕೊಂಡೊಯ್ಯವಲ್ಲಿ ಯಶಸ್ವಿಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಚಂದ್ರಶೇಖರ ಬಂಗೇರ,ನಿರ್ದೇಶಕರಾದ ಲಿಂಗಪ್ಪ ಪೂಜಾರಿ,ಸುಂದರ ಪೂಜಾರಿ,ವಿಜಯಾನಂದ, ಲೋಲಾಕ್ಷಿ ಶೆಟ್ಟಿ,ಲತಾ ಮೊದಲಾದವರಿದ್ದರು.
