ಬಂಟ್ವಾಳ: ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘವು ೨೦೨೪-೨೫ನೇ ಸಾಲಿನಲ್ಲಿ ೧೧೫೮.೪೩ ಕೋಟಿ ರೂ. ವ್ಯವಹಾರ ನಡೆಸಿ ೫.೦೪ ಕೋಟಿ ರೂ. ನಿವ್ವಳ ಲಾಭ ಗಳಿಸಿರುತ್ತದೆ ಎಂದು  ಸಂಘದ ಅಧ್ಯಕ್ಷ ಸುರೇಶ್ ಕುಲಾಲ್‌ ಅವರು ತಿಳಿಸಿದ್ದಾರೆ. 

ಬಿ.ಸಿ.ರೋಡಿನ “ಸ್ಪರ್ಶಾ ಕಲಾ ಮಂದಿರ”ದಲ್ಲಿ ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘದ ೨೦೨೪-೨೫ನೇ ಸಾಲಿನ ವಾರ್ಷಿಕ ಮಹಾಸಭೆಯ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ,ಸಂಘದ ಸದಸ್ಯರಿಗೆ  ೧೭ ಶೇ. ರಂತೆ ಡಿವಿಡೆಂಡ್ ನ್ನು ಪ್ರಕಟಿಸಿದರು. 

ಸಂಘದಲ್ಲಿ ೯೦೪೭ ಸದಸ್ಯರಿದ್ದು ಪಾಲು ಬಂಡವಾಳ ೮.೦೯ ಕೋ.ರೂ., ಠೇವಣಾತಿಗಳು ೨೨೯.೪೭ ಕೋ.ರೂ.,  ೧೯.೭೮ ಕೋ.ರೂ.ನಿಧಿಗಳು,ಸಂಘದ ದುಡಿಯುವ ಬಂಡವಾಳ ೨೫೯.೬೬ ಕೋ.ರೂ.ಆಗಿದ್ದು,೫೫.೫೫ ಕೋ.ರೂ.ವಿನಿಯೋಗಗಳು,೨೧೬.೩೭ ಕೋ.ರೂ.ಸಾಲಗಳನ್ನು ಹೊಂದಿದ್ದು, ಶೇ. ೯೫.೦೪ ಸಾಲ ವಸೂಲಾತಿಯಾಗಿದೆ. ಅಡಿಟ್ ವರ್ಗೀಕರಣದಲ್ಲಿಯು ‘ಎ’ ತರಗತಿ ಪಡೆದಿದೆ ಎಂದರು.

ಸಂಘದ ಸದಸ್ಯರಿಗೆ ಠೇವಣಿ ಮುಖೇನ ಉತ್ತಮ ಸೇವಾ ಸೌಲಭ್ಯವನ್ನು ನೀಡುವಂತಹ ಸಮಾಜ ಸಂಧ್ಯಾ ಸಮೃದ್ಧಿ ನಿಧಿಯನ್ನು ಈ ಸಂದರ್ಭ  ಉದ್ಘಾಟಿಸಲಾಯಿತು. 

ಉಪಾಧ್ಯಕರಾದ ಜನಾರ್ಧನ ಕುಲಾಲ್ ಬೊಂಡಾಲ,ನಿರ್ದೇಶಕರಾದ  ಬಿ. ರಮೇಶ್  ಸಾಲ್ಯಾನ್,   ಸುರೇಶ್ ಎನ್.,  ರಮೇಶ್ ಸಾಲ್ಯಾನ್, ಅರುಣ್ ಕುಮಾರ್,  ಭೋಜ ಸಾಲಿಯಾನ್ , ಕಿರಣ್ ಕುಮಾರ್ ಎ., ಪ್ರೇಮನಾಥ ಬಂಟ್ವಾಳ್, ಹರೀಶ, ವಿದ್ಯಾ,  ಮಾಲತಿ ಮಚೇಂದ್ರ, ಎಮ್. ಕೆ ಗಣೇಶ್ ಸಮಗಾರ,  ಜಗನ್ನಿವಾಸ ಗೌಡ ರೇಖಾ ನಾಯ್ಕ ವೇದಿಕೆಯಲ್ಲಿದ್ದರು.

ನಿರ್ದೇಶಕರಾದ  ಸತೀಶ್ ರವರು ಸ್ವಾಗತಿಸಿದರು, ಪ್ರಧಾನ ವ್ಯವಸ್ಥಾಪಕರಾದ ಬೋಜ ಮೂಲ್ಯ ಅವರು ವಾರ್ಷಿಕ ವರದಿಯನ್ನು ವಾಚಿಸಿ, ಲೆಕ್ಕ ಪತ್ರವನ್ನು ಮಂಡಿಸಿದರು.  ಸಹಾಯಕ ಪ್ರಧಾನ ವ್ಯವಸ್ಥಾಪಕರಾದ  ಮೋಹನ್ ಎಮ್. ಕೆ. ಮತ್ತು ವ್ಯವಸ್ಥಾಪಕರಾದ ವಿನೋದ್ ಕುಮಾರ್ ಸಹಕರಿಸಿದರು.  ನಿರ್ದೇಶಕರಾದ ಕಿರಣ್ ಕುಮಾರ್ ಎ. ವಂದಿಸಿದರು.  ಬಳಿಕ ಸನಾತನ ನಾಟ್ಯಾಲಾಯ ಮಂಗಳೂರು ಇವರಿಂದ ನೃತ್ಯ ಕಾರ್ಯಕ್ರಮ ಮತ್ತು ಸಹಕಾರಿ ಬಂಧುಗಳಿಂದ ಮನೊರಂಜನಾ ಕಾರ್ಯಕ್ರಮ ನೆರವೇರಿತು.

By suddi9

Leave a Reply

Your email address will not be published. Required fields are marked *