ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಭವಿಷ್ ಘಟಕದ ವತಿಯಿಂದ  ಶಿಕ್ಷಕರ ದಿನಾಚರಣೆ ಹಾಗೂ ೨೦೨೫-೨೬ನೇ ಸಾಲಿನ ಭವಿಷ್ ಘಟಕದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.  

ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿ ಅಭಾಗ್ಯತರು ದೀಪ ಪ್ರಜ್ವಲನಗೈದು ಡಾ| ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವುದರ ಮೂಲಕ ಭವಿಷ್ ಘಟಕದ ಚಟುವಟಿಕೆಗಳಿಗೆ ಚಾಲನೆ ನೀಡಿದರು

.

ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆಯನ್ನು ನೆರವೇರಿಸಿ ಆಶೀರ್ವಾದವನ್ನು ಪಡೆದ ಭಾವನಾತ್ಮಕವಾದ ಕ್ಷಣಕ್ಕೆ  ಕಾರ್ಯಕ್ರಮ ಸಾಕ್ಷಿಯಾಯಿತು. ಭವಿಷ್ ಘಟಕದ ನೂತನ ವಿದ್ಯಾರ್ಥಿಗಳು ಹಿರಿಯರಿಂದ ತಾಂಬೂಲ ಪಡೆದು ಆಶೀರ್ವಾದ ಪಡೆದರು. 

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಭವಿಷ್ಯಕ್ಕೆ ದಾರಿ ತೋರಿಸುವವರೇ ಗುರುಗಳು, ಜೀವನದಲ್ಲಿ ಶಿಕ್ಷಕರಾಗುವುದಕ್ಕಿಂತ ಮಿಗಿಲಾದ ಸಂಗತಿಯಿಲ್ಲ, ಇದು ಬಹಳ ಶ್ರೇಷ್ಠವಾದ ವೃತ್ತಿಯಾಗಿದೆ ಎಂದರು. 

ಭವಿಷ್ ಘಟಕದ ಪ್ರಾಂತ ಸಂಯೋಜಕರಾದ  ಗಣಪತಿ ಹೆಗ್ಡೆ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಭವಿಷ್ ಘಟಕವನ್ನು ಉದ್ಘಾಟಿಸಿ ಮಾತನಾಡಿ,

 ಗುರು-ಶಿಷ್ಯ ಸಂಬಂಧವು ತಾಯಿ-ಮಗುವಿನ ಸಂಬಂಧದಂತಿರಬೇಕು ಎಂದರು.  

ಪುತ್ತೂರು ನರೇಂದ್ರ ಪದವಿಪೂರ್ವ ಕಾಲೇಜಿನ  ಉಪನ್ಯಾಸಕಿ, ಯಕ್ಷಗಾನ ಕಲಾವಿದೆ ಮಧುರಾ ಗಣರಾಜ್ ಭಟ್ ಅತಿಥಿಗಳಾಗಿದ್ದರು.

ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರಕಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಿಷ್ ಘಟಕದ ನಿರ್ದೇಶಕಿ  ಜಯಲಕ್ಷ್ಮಿ ವೇದಿಕೆಯಲ್ಲಿದ್ದರು. ವಿದ್ಯಾರ್ಥಿಗಳಾದ ಕು. ದಿವ್ಯಲಕ್ಷ್ಮೀ ಸ್ವಾಗತಿಸಿದರು, ಅಕ್ಷಯ ನರಸಿಂಹ ವಂದಿಸಿದರು, ಕು. ಧನುಶ್ರೀ ಕಾರ್ಯಕ್ರಮ ನಿರ್ವಹಿಸಿದರು.

By suddi9

Leave a Reply

Your email address will not be published. Required fields are marked *