ಬಂಟ್ವಾಳ: ವಿದ್ಯಾಭಾರತಿ ಕರ್ನಾಟಕ ದ.ಕ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ಗಣಿತ ಮಾದರಿ ಪ್ರದರ್ಶನದಲ್ಲಿ ಸಮ ಬಹುಭುಜಾಕೃತಿ ಗುಣ ಧರ್ಮಗಳ ಮೇಲೆ ಆಧಾರಿತ ಪ್ರದರ್ಶನ ಎಂಬ ವಿಷಯದಲ್ಲಿ  ೬ನೇ ತರಗತಿಯ ಸ್ಕಂದತೇಜ ಪ್ರಥಮ ಸ್ಥಾನ, ಸಂಸ್ಕೃತಿ ಜ್ಞಾನ ರಸಪ್ರಶ್ನೆಯಲ್ಲಿ ೭ನೇ ತರಗತಿಯ ಪ್ರಾಪ್ತಿ, ಅಪ್ರಮೇಯ ತೋಳ್ಪಾಡಿ, ೬ನೇ ತರಗತಿಯ ಭೂಮಿಕ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗಣಿತ ಮಾದರಿ ಪ್ರದರ್ಶನದಲ್ಲಿ ಸೃಜನಾತ್ಮಕ ಮಾದರಿ ಎಂಬ ವಿಷಯದಲ್ಲಿ ೬ನೇ ತರಗತಿಯ ಅನ್ವೇಷ್ ಪ್ರಭು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಇವರೆಲ್ಲರನ್ನು ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಅಧ್ಯಾಪಕೇತರರು ಅಭಿನಂದಿಸಿದರು.

By suddi9

Leave a Reply

Your email address will not be published. Required fields are marked *