ಬಂಟ್ವಾಳ:  ಜನ ಶಿಕ್ಷಣ ಟ್ರಸ್ಟ್ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯತ್, ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್ ಇವುಗಳ ಸಹಾಭಾಗೀತ್ವದಲ್ಲಿ ಬಿ.ಸಿ.ರೋಡಿನ ಸ್ತ್ರೀ ಶಕ್ತಿ ಭವನದಲ್ಲಿ ತಾಲೂಕು ಮಟ್ಟದ ಸಮುದಾಯದತ್ತ ಸಾಂತ್ವನ ಸಂವಾದ ಕಾರ್ಯಕ್ರಮ ನಡೆಯಿತು.


ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಶೀನ ಶೆಟ್ಟಿ ರವರು ಸಂವಾದ ನಡೆಸಿಕೊಟ್ಟರು. ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ರವರು ಸ್ವಚ್ಛ ಮನೆ ಸ್ವಾಭಿಮಾನಿ ಕುಟುಂಬ ಸ್ವಯಂ ಘೋಷಣೆ ಪತ್ರ ಪುಸ್ತಕ ಬಿಡುಗಡೆ ಮಾಡಿದರು.


ಬಂಟ್ವಾಳ ತಾಲುಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಮಮ್ತಾಜ್, ತಾಲೂಕು ಸಂಜೀವಿನಿ ಒಕ್ಕೂಟಗಳ ವ್ಯವಸ್ಥಾಪಕರಾದ  ಸುಧಾ, ಪತ್ರಕರ್ತರಾದ ಮೌನೇಶ್ ವಿಶ್ವಕರ್ಮ, ಮಂಗಳೂರು ಸೆನ್ ಠಾಣೆಯ ಪೊಲೀಸ್ ಸಿಬ್ಬಂದಿ ಪ್ರವೀಣ್ ಹಾಗೂ ಪ್ರಮೀಳಾ, ಜಿಲ್ಲಾ ಮಿಷನ್ ಶಕ್ತಿ ಯೋಜನೆಯ ಸಂಯೋಜಕಿ  ಅನುಷ್ಯ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕರಾದ ಕೃಷ್ಣ ಮೂಲ್ಯ, ಬಂಟ್ವಾಳ ಗ್ರಾಮಾಂತರ, ವಿಟ್ಲ ಮತ್ತು ಪುಂಜಾಲಕಟ್ಟೆ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಗಳಾದ  ವಿನಯ, ಪೂಜಾ, ರಮ್ಯಾ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಂತಿ, ಸುಗ್ರಾಮ ಸಂಯೋಜಕರಾದ ಚೇತನ್, ಕಾವೇರಿ, ಪುತ್ತೂರು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ ನಿಶಾಪ್ರಿಯಾ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ  ಗಾಯತ್ರಿ,  ಬಂಟ್ವಾಳ ಹಾಗೂ ಉಳ್ಳಾಲ ತಾಲೂಕಿನ ಗ್ರಾಮಗಳ ಎನ್ ಆರ್ ಎಲ್ ಎಂ ಸಂಜೀವಿನಿ ಒಕ್ಕೂಟದ ಎಲ್ ಸಿ ಆರ್ ಪಿ  ಹಾಗೂ ಬಂಟ್ವಾಳ  ಪುರಸಭಾ ಎನ್ ಯು ಎಲ್ ಎಂ ಸಿಆರ್ ಪಿ  ರವರು, ಬಂಟ್ವಾಳ ಸಾಂತ್ವನ ಬಳಗದ ಡೀಲಕ್ಷಿ, ಸುಂದರಿ ಕನ್ಯಾನ ಹಾಗೂ ಶಶಿಕಲಾ  ಉಪಸ್ಥಿತರಿದ್ದರು. 


ಸಮಾಜ ಕಾರ್ಯ ವಿಭಾಗದ ಮಂಗಳೂರು ವಿಶ್ವ ವಿದ್ಯಾನಿಲಯ, ರೋಶನಿ ನಿಲಯ, ವಿಟ್ಲ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳು, ವಾಮದಪದವು ಕಾಲೇಜಿನ ಪದವಿ ವಿದ್ಯಾರ್ಥಿಗಳು ಕಾರ್ಯಕ್ರದಲ್ಲಿ ಭಾಗವಹಿಸಿ ಕಿರುನಾಟಕವನ್ನು ಪ್ರಸ್ತುತ ಪಡಿಸಿದರು.

ಬಂಟ್ವಾಳ ತಾಲೂಕು ಸಾಂತ್ವನ ಕೇಂದ್ರದ ಆಪ್ತಸಮಾಲೋಚಕಿ  ವಿದ್ಯಾ ಪ್ರಸ್ತಾವನೆಗೈದು, ಸ್ವಾಗತಿಸಿದರು.

ಸಮಾಜ ಕಾರ್ಯಕರ್ತರಾದ ಕು. ದಾಕ್ಷಾಯಿಣಿ ಕಾರ್ಯಕ್ರಮ ನಿರೂಪಿಸಿದರು, ಪ್ರಶಾಂತ್ ರವರು ವಂದಿಸಿದರು, ರಶ್ಮಿ ಸಹಕರಿಸಿದರು

By suddi9

Leave a Reply

Your email address will not be published. Required fields are marked *