ಫರಂಗಿಪೇಟೆ ಹೆದ್ದಾರಿಯಲ್ಲಿ ಶ್ರೀ ಮಹಾಗಣಪತಿಯ ವೈಭವಪೂರ್ಣ ಶೋಬಾಯಾತ್ರೆ
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ,ಫರಂಗಿಪೇಟೆ ಇದರ ಆಶ್ರಯದಲ್ಲಿ ಫರಂಗಿಪೇಟೆ ಸೇವಾಂಜಲಿ ಸಭಾಭವನದಲ್ಲಿ ಆರಾಧಿಸಲ್ಪಟ್ಟ 43ನೇ ವರ್ಷದ ಶ್ರೀಮಹಾಗಣಪತಿ ವಿಗ್ರಹದ ವೈಭವಪೂರ್ಣ ಶೋಬಾಯಾತ್ರೆಯು ಶುಕ್ರವಾರ ಸಂಜೆ ರಾ.ಹೆ.ಯ ರಾಜಾರಸ್ತೆಯಲ್ಲಿ ನಡೆಯಿತು.

ಇದೇ ಮೊದಲ ಬಾರಿಗೆ ಹಿಂದೂಗಳ ಪವಿತ್ರ ಸ್ಥಳ ವಾರಾಣಸಿಯ ಗಂಗಾ ನದಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲಿ ಫರಂಗಿಪೇಟೆ ಗಣೇಶೋತ್ಸವ ಶೋಭಾಯಾತ್ರೆ ಗಂಗಾ ಆರತಿಗೂ ಸಾಕ್ಷಿಯಾಯಿತು. ಸಾವಿರಾರುಮಂದಿ ಭಕ್ತರು ಈ ಗಂಗಾರತಿಯನ್ನು ಕಣ್ತುಂಬಿಕೊಂಡರು.ಫರಂಗಿಪೇಟೆ,ಬರ್ಕೆ ಕಾಂಪ್ಲೆಕ್ಸ್ ಬಳಿ*
ಕಡೆಗೋಳಿ,ಮಾರಿಪಳ್ಳ ಹಾಗೂ ಅರ್ಕುಳ ನೇತ್ರಾವತಿ ಹೊಳೆಬದಿಯಲ್ಲಿ ಗಂಗಾರತಿ ನಡೆಸಲಾಯಿತು.

ಶೋಬವಾಯಾತ್ರೆಯು ಪ್ರತಿಷ್ಠಾಪಿಸಲ್ಪಟ್ಟ ಸಭಾಭವನದಿಂದ ಹೊರಟು ಕಡೆಗೋಳಿ ಪೊಳಲಿದ್ವಾರದ ಬಳಿ ಹೊರಗೆ ರಾ.ಹೆ.ಯ ರಾಜಾರಸ್ತೆಯಲ್ಲಿ ಸಾಗಿ ವಾಪಾಸ್ ಅದೇ ಮಾರ್ಗವಾಗಿ ಸಾಗಿ ಬಂದು ಅರ್ಕುಳ ನೇತ್ರಾವತಿ ಹೊಳೆಯಲ್ಲಿ ಜಲಸ್ತಂಭನಗೊಳಿಸಲಾಯಿತು.
ಮಳೆಯ ನಡುವೆಯು ವೈಭವಪೂರ್ಣವಾಗಿ ನಡೆದ ಶೋಭಾಯಾತ್ರೆಗೆ ವಿವಿಧ ಸಂಘ ಸಮನಸ್ಥಗಳಿಂದ ಸ್ತಬ್ದಚಿತ್ರ,ಟ್ಯಾಬ್ಲೋ,ಕುಣೊತ ಭಜನೆ,ವಾದ್ಯಗೋಷ್ಟಿಗಳು ವಿಶೇಷ ಮೆರಗು ನೀಡಿತು.ಪ್ರತಿಷ್ಠಾನ,ಗಣೆಶೋತಗಸವ ಸಮಿತಿ ಪದಾಧಿಕಾರಿಗಳು,ಪ್ರಮುಖರು ಮೆರವಣಿಗೆಯಲ್ಲಿ ಸಾಗಿಬಂದರು.
ರಸ್ತೆಯ ಇಕ್ಕೆಲ,ಕಟ್ಟಡಗಳಲ್ಲಿ ನಿಂತು ಸಾವಿರಾರು ಭಕ್ತರು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಇದರೊಂದಿಗೆ ಮೂರುದಿನಗಳ ಫರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಸಂಪನ್ನಗೊಂಡಿತು. ಶೋಭಾಯಾತ್ರೆ ವೇಳೆ ಹೆದ್ದಾರಿಯಲ್ಲಿ ವಾಹನ ಸಂಚಾರದಲ್ಲಿ ಅಡಚಣೆಯಾಗದಂತೆ ಸ್ವಯಂಸೇವಕರು,ಪೊಲೀಸರೊಂದಿಗೆ ಸಹಕರಿಸಿದರು.



