ಬಂಟ್ವಾಳ :ತಾಲೂಕಿನ ಸಂಗಬೆಟ್ಟು ಗ್ರಾಮ ಅಜ್ಜಿಬಾಕ್ಯರು ನಿವಾಸಿ,ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ನಿವೃತ ಉದ್ಯೋಗಿ ಜನಾರ್ದನ ಶೆಟ್ಟಿಗಾರ್ ( 67 ) ರವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.

ಮೃತರು ಪತ್ನಿ,ಇಬ್ಬರು ಪುತ್ರಿಯರು, ಒರ್ವ ಪುತ್ರ ಮತ್ತು ಬಂಧು,ಬಳಗವನ್ನು ಅಗಲಿದ್ದಾರೆ.ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಸಕ್ರಿಯ ಸದಸ್ಯರಾಗಿದ್ದರು.ಇವರ ನಿಧನಕ್ಕೆ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು,ನಿರ್ದೇಶಕರು ಹಾಗೂ ಸಿಬ್ಬಂದಿವರ್ಗ ಸಂತಾಪ ವ್ಯಕ್ತಪಡಿಸಿದೆ
