ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ  2022-23 ರ ಸಾಲಿನಲ್ಲಿ 44,438 ಅದ್ಯತಾಪಡಿತರ ಚೀಟಿ ಹೊಂದಿದ್ದು, ಪ್ರಸ್ತುತ 60 ಕುಟುಂಬಗಳ ಅದ್ಯತಾ ಪಡಿತರ ಚೀಟಿ ರದ್ದು ಪಡಿಸಲಾಗಿದೆ ಎಂದು ರಾಜ್ಯದ ಆಹಾರ,ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ,ಕಾನಾನುಮಾಪನ ಇಲಾಖಾ ಸಚಿವರಾದ ಕೆ.ಎಚ್ .ಮುನಿಯಪ್ಪ ತಿಳಿಸಿದ್ದಾರೆ.


ಕರ್ನಾಟಕ ವಿಧಾನಮಂಡಲದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಚುಕ್ಕೆ ಗುರುತು ಇಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರುಹಾಲಿ ಅನರ್ಹ ಪಡಿತರ ಚೀಟಿ ಪರಿಶೀಲನೆ‌ಮಾತ್ರ ನಢಯುತ್ತಿದ್ದು,ಯಾವುದೇ ಪಡಿತರ ಚೀಟಿ ರದ್ದುಪಡಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.


ರಾಜ್ಯದಲ್ಲಿ ಅನರ್ಹ ಪಡಿತರ ಪರಿಶೀಲನೆ ಕಾರ್ಯ ಮಾತ್ರ ನಡೆಯುತ್ತಿದ್ದು,ಯಾವುದೇ ಪಡಿತರ ಚೀಟಿ ರದ್ದು ಪಡಿಸಿರುವುದಿಲ್ಲ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಮರು ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವ ಕೆ.ಎಚ್.ಮುನಿಯಪ್ಪ ಅವರು ಮೃತಪಟ್ಟಿರುವ ಏಕವ್ಯಕ್ತಿ ಪಡಿತರ ಚೀಟಿಯ ಮತ್ತ ಸ್ವ- ಇಚ್ಚೆಯಿಂದ ಪಡಿತರವನ್ನು ಅದ್ಯಾ೯ಪಣೆ ಮಾಡಿ ಬೇರೆಕಡೆಯಲ್ಲಿ ವಾಸ್ತವ್ಯಮಾಡುವವರ ಪಡಿತರಚೀಟಿಯನ್ನು ಮಾತ್ರ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *