ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಬಂಟ್ವಾಳ: ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ವಿದ್ಯಾವರ್ಧಕ ಸಂಘ ವಿದ್ಯಾಗಿರಿ ಬಂಟ್ವಾಳ ಇದರ ಸದಸ್ಯೆ ಅಲ್ಕಾ ಕೂಡಿಗೆ ಶೆಣೈ ಧ್ವಜಾರೋಹಣಗೈದರು.

ಮುಖ್ಯೋಪಾಧ್ಯಾಯ ಹರಿಪ್ರಸಾದ್ ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭ ಎನ್.ಸಿ.ಸಿ ಆರ್ಮಿವಿಂಗ್, ಎನ್.ಸಿ.ಸಿ ನೇವಲ್ ವಿಂಗ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥಸಂಚಲನ ನಡೆಯಿತು. ವಿವಿಧ ಸ್ಫರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ವಿದ್ಯಾರ್ಥಿಗಳಿಂದ ದೇಶ ಭಕ್ತಿಯನ್ನು ಬಿಂಬಿಸುವ ‘ಈಸೂರು ದಂಗೆ’ ಕಿರುಪ್ರಹಸನ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಚೈತ್ರ ಶೆಟ್ಟಿ, ಪೂರ್ವ ಪ್ರಾಥಮಿಕ ವಿಭಾಗದ ಸಂಯೋಜಕಿ ವೀಣಾ ದೇವಾಡಿಗ, ಎನ್.ಸಿ.ಸಿ ಆರ್ಮಿವಿಂಗ್ ಅಧಿಕಾರಿ ರವಿ, ಎನ್.ಸಿ.ಸಿ ನೇವಲ್ ವಿಂಗ್ ಅಧಿಕಾರಿ ರತ್ನಾಕರ ಗೌಡ, ಶಿಕ್ಷಕ -ಶಿಕ್ಷಕೇತರರು ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಾನ್ ಸಜಿತ್ ಸ್ವಾಗತಿಸಿ, ಮೇಧಾಶ್ರೀ ಮತ್ತು ಝೀಭಾ ಕಾರ್ಯಕ್ರಮ ನಿರೂಪಿಸಿದರು. ಪ್ರತ್ಯುಷ್ ಜೆ.ಎಂ ವಂದಿಸಿದರು.



