ಬಂಟ್ವಾಳ: ಪ್ರತಿಯೊಂದು ವೇದಶಾಸ್ತ್ರಗಳು ಸಂಸ್ಕೃತದಲ್ಲಿಯೇ ಇದ್ದು, ದೇವ ಭಾಷೆಯಾಗಿರುವ ಸಂಸ್ಕೃತದಲ್ಲಿ ವ್ಯವಹರಿಸಬೇಕು ಎಂದು ತಿರುಪತಿ ವೆಂಕಟ್ರಮಣ ದೇವಸ್ಥಾನದ ಭೂತಪೂರ್ವ ಮುಖ್ಯಅರ್ಚಕರಾದ ಶಂಕರನಾರಾಯಣ ಶರ್ಮ ಹೇಳಿದ್ದಾರೆ.

ಶನಿವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ನಡೆದಸಂಸ್ಕೃತೋತ್ಸವ ಮುಖ್ಯ ಅತಿಥಿಯಾಗಿಭಾಗವಹಿಸಿ ಅವರು ಮಾತನಾಡಿದರು.ಶ್ರೀರಾಮ ವಿದ್ಯಾಕೇಂದ್ರದ ಸಹ ಸಂಚಾಲಕರಾದ ರಮೇಶ್ ಶ್ರೀಮಾನ್ ಅವರುಕಾರ್ಯಕ್ತಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ರಕ್ಷೆಯ ಮಹತ್ವ ತಿಳಿಸಿದರು.
ಪುತ್ತೂರು ತಾಲೂಕು ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹಿಕಾ ಗೀತಾ ತಾಳ್ತಾಜೆ ಅವರು ರಕ್ಷಾಬಂಧನದ ಮಹತ್ವವನ್ನು ತಿಳಿಸಿದರು.

ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಚಂದ್ರಶೇಖರ, ಉಪಾಧ್ಯಕ್ಷೆ ರಂಜಿನಿ ಎಸ್, ಸದಸ್ಯರಾದ ಮಲ್ಲಿಕಾ ಎನ್.ಎಂ, ಚೈತ್ರ, ನಿತಿನ್ ಕುಮಾರ್, ಹಿರಣ್ಮಯಿ, ವಿಠಲ, ಎನ್.ಶೋಭಾ ಕುಮಾರಿ, ಲತೀಶ್ ಕೆ., ಮಮತಾ, ರಾಜೀವ, ಹರಿಣಾಕ್ಷಿ ಪ್ರೌಢಶಾಲೆಯ ಮುಖ್ಯಗುರುಗಳಾದ ಗೋಪಾಲ್ ಶ್ರೀಮಾನ್ ಉಪಸ್ಥಿತರಿದ್ದರು.
ಸಂಸ್ಕೃತೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ನೃತ್ಯ ಮತ್ತು ಸಂಸ್ಕೃತ ಯಕ್ಷ ರೂಪಕವನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ 2024- 25ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ ಯಲ್ಲಿ ಸಂಸ್ಕೃತದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿದ್ಯಾರ್ಥಿಗಳು ಪರಸ್ಪರ ರಕ್ಷೆಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನವನ್ನು ಆಚರಿಸಿದರು. ವಿದ್ಯಾರ್ಥಿಗಳು ಸಂಸ್ಕೃತದ ಘೋಷಣೆಯನ್ನು ಹೇಳಿದರು.
ಭೂಮಿಕಾ ಸ್ವಾಗತಿಸಿ, ಚಿನ್ಮಯಿ ವಂದಿಸಿದಳು. ಶುಭ ಕಾರ್ಯಕ್ರಮ ನಿರೂಪಿಸಿದಳು.
