ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಪದಾಧಿಕಾರಿಗಳ ಸಭೆಯು ಪುತ್ತೂರು ಕೊಂಬೆಟ್ಟಿನ  ಸೌಜನ್ಯ ನಿವಾಸದಲ್ಲಿ ಜರಗಿತು.ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಪ್ರೊ ಎ.ವಿ ನಾರಾಯಣ ಸಭೆಯನ್ನು ಉದ್ಘಾಟಿಸಿದರು.


ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ಋಣಾತ್ಮಕವಾದ ಭಾವನೆಯನ್ನು ಬಿಟ್ಟು ಶಿಸ್ತು ಮತ್ತು ಬದ್ಧತೆಯಿಂದ ಪ್ರತಿಷ್ಠಾನದ ಚಟುವಟಿಕೆಗಳನ್ನು  ನಡೆಸುವ ಅಗತ್ಯವಿದೆ ಎಂದರು.
ಪ್ರತಿಷ್ಠಾನದ ಐದು ವರ್ಷಗಳ ಸಿಂಹಾವಲೋಕನ ಮಾಡಿ ಕಾರ್ಯಕ್ರಮಗಳಿಗೆ ಹೊಸ ರೂಪವನ್ನು ಕೊಡುವ ಬಗ್ಗೆ ಮಾಹಿತಿ ನೀಡಿದರು.


ಪುತ್ತೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಆಳ್ವ  ಮಾತನಾಡಿ ಆಗಸ್ಟ್ 17ರಂದು ಶ್ರೀ ಕ್ಷೇತ್ರ ಪಡುಮಲೆಯಲ್ಲಿ ಜರಗಲಿರುವ ಜಿಲ್ಲಾ ಮಟ್ಟದ ಪ್ರಥಮ ಕಾರ್ಯಾಗಾರದಲ್ಲಿ ಹಿರಿಯರಿಗೆ ಉಪಯುಕ್ತವಾಗುವ  ಮೂರು ವಿಚಾರಗೋಷ್ಠಿಗಳು, ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ  ಬಗ್ಗೆ  ಮಾಹಿತಿ ನೀಡಿದರು.


ಪ್ರತಿಷ್ಠಾನದ ವಾರ್ಷಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಟ್ರಸ್ಟಿಗಳ ವಿವಿಧ ಸಮಿತಿಗಳನ್ನು ರಚಿಸಲಾಯಿತು.
ಶಂಕರಿ ಶರ್ಮ ಪುತ್ತೂರು ಪ್ರಾರ್ಥಿಸಿ ಪ್ರತಿಷ್ಠಾನದ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು.ಉಪಾಧ್ಯಕ್ಷ ಎಂ. ಜಯರಾಮ ಭಂಡಾರಿ ಧರ್ಮಸ್ಥಳ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *