ಬಂಟ್ವಾಳ: ಒಡಿಯೂರು ಶ್ರೀಗುರುದೇವನಂದ ಸ್ವಾಮೀಜಿ ಯವರ ಜನ್ಮ ದಿನೊತ್ಸವದ ಪ್ರಯುಕ್ತ ಪಾಣೆಮಂಗಳೂರು ವಲಯದ ಶಂಭೂರು ಘಟ ಸಮಿತಿ, ಬಾಳ್ತಿಲ ಗ್ರಾಮ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ನೀರಪಾದೆ ವತಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ ನೀರಪಾದೆಯಲ್ಲಿ ಸ್ವಚ್ಚತಾ ಕಾರ್ಯಕ್ರಮವು ಜರಗಿತು.

ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಚೆಂಡೆ ಸಸಿ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಶಿವರಾಜ್ ಕಾಂದಿಲ, ಅಶೋಕ ಪೂಜಾರಿ ಗಣೇಶ್ ನಗರ, ವಲಯ ಮೇಲ್ವಿಚಾರಕಿ ಸುನೀತಾ, ಸೇವಾದೀಕ್ಷಿತೆ ಭವ್ಯ,
ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಸಂದೇಶ ಬೆರ್ಕಳ, ಸುಶನ್ ಪೂಜಾರಿ, ಚರಣ್ ಕುರ್ಪೆ, ತಾರಾನಾಥ್, ಜಯಂತಿ, ಕಮಲಾಕ್ಷಿ, ಸಸ್ಯ ಪ್ರೇಮಿ ನಿತಿನ್ ಪೂಜಾರಿ ಮೊಟ್ಟಿಕಲ್ಲು, ಸರಕಾರಿ ಆಸ್ಪತ್ರೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಸ್ವಸಹಾಯ ಸಂಘ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
