ಭೂಮಾಪಕ ರಾಮಚಂದ್ರ ನಿಧನ
ಬಂಟ್ವಾಳ:ಇಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ಧೇಶಕರ ಕಚೇರಿಯಲ್ಲಿ ಭೂಮಾಪಕರಾಗಿ ಕರ್ತವ್ಯದಲ್ಲಿದ್ದ ರಾಮಚಂದ್ರ (48) ಇವರು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಗುರುವಾರ ನಿಧನರಾದರು.

ಮೃತರಿಗೆ ಪತ್ನಿ ಮತ್ತು ಮಕ್ಕಳು ಇದ್ದಾರೆ. ಮೂಲತಃ ಚಾಮರಾಜನಗರ ಜಿಲ್ಲೆ ನಿವಾಸಿಯಾಗಿರುವ ಇವರು 2010ರಲ್ಲಿ ಇಲಾಖೆಗೆ ಸೇರಿದ್ದರು.



