ಬಂಟ್ವಾಳ: ಇಲ್ಲಿನ ಬೈಪಾಸ್ ನಿತ್ಯಾನಂದ ನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ 13ನೇ ವಾರ್ಷಿಕ ಶ್ರಾವಣ ಮಾಸದ “ನವದಿನಗಳ ಭಜನಾ ಸಂಕೀರ್ತನೆ”ಯು ಆಗಸ್ಟ್ 01ರಿಂದ 09 ರವರೆಗೆ ನಡೆಯಲಿದೆ ಎಂದು ಮಂದಿರದ ಆಡಳಿತ ಸಮಿತಿ ಅಧಗಯಕ್ಷ ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ವಾಮೀಜಿದ್ವಯರಿಗೆ ಪ್ರತಿದಿನ ಸಂಜೆ 7 ಗಂಟೆಗೆ “ತುಪ್ಪದ ದೀಪ”ವನ್ನು ಬೆಳಗಿ ಭಜನಾ ಕಾರ್ಯಕ್ರಮ ಆರಂಭವಾಗಲಿದ್ದು,ರಾತ್ರಿ 8-30ಕ್ಕೆ ಮಹಾಪೂಜೆ ನಂತರ ಎಲ್ಲಾ ಭಕ್ತಾಧಿಗಳಿಗೆ “ತೀರ್ಥ ಪ್ರಸಾದ” ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಅದೇರೀತಿ 20ನೇ ವರ್ಷದ ಆಗಸ್ಟ್ 8 ರಂದು ಸಂಜೆ 5.30 ರಿಂದ ಸಾಮೂಹಿಕ “ಶ್ರೀ ವರಮಹಾಲಕ್ಷ್ಮೀ ಪೂಜಾ ವೃತ”ವುಮಂದಿರದಲ್ಲಿ ನಡೆಯಲಿದೆ.ಆ.15 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 35ನೇ ವರ್ಷದ ಮೊಸರು ಕುಡಿಕೆ ಉತ್ಸವವು ಮಂದಿರ ವಠಾರದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ಈ ಸಂದರ್ಭ ವಿವಿಧ ಆಟೋಟ ಸ್ಪರ್ಧೆಗಳು,ಸಂಜೆ ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ ನಂತರ ಬಹುಮಾನ ವಿತರಣೆ,ರಾತ್ರಿ 7 ರಿಂದ 12 ರ ತನಕ ಭಜನಾ ಸಂಕೀರ್ತನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
