ಬಿಜೆಪಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ
ಬಂಟ್ವಾಳ :ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಕಾರ್ಯಕಾರಿಣಿ ಸಭೆ ಶನಿವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆಯಿತು.ಬಂಟ್ವಾಳ ಮಂಡಲ ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಡಾ. ಮಂಜುಳ ರಾವ್ ಪಕ್ಷ ಸಂಘಟನೆಯ ಬಗ್ಗೆ ಮಾತನಾಡಿದರು. ಜಿಲ್ಲಾಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಂಧ್ಯಾ ವೆಂಕಟೇಶ್, ಲಖಿತಾ ಆರ್ ಶೆಟ್ಟಿ, ಪ್ರಭಾರಿಗಳಾದ ಸುಮಾ ರೈ,ಮಂಡಲ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಶಕೀಲಾ ಕೃಷ್ಣಪ್ಪ ಪೂಜಾರಿ, ಜಯಶ್ರೀ ಅಶೋಕ್,ಮಂಡಲ ಕಾರ್ಯದರ್ಶಿ ಹಿರನ್ಮಯಿ, ಪ್ರೇಮಾ, ಜಿಲ್ಲಾ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಕಮಲಾಕ್ಷಿ ಪೂಜಾರಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯೆ ಭವಾನಿ ಶೆಟ್ಟಿ,ಬಂಟ್ವಾಳ ಮಂಡಲದ ಅಧ್ಯಕ್ಷರಾದ ಚೆನ್ನಪ್ಪ ಆರ್. ಕೋಟ್ಯಾನ್, ಪ್ರ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಹಾಗೂ ಪಕ್ಷದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.ಮಹಿಳಾ ಮೋರ್ಛಾದ ಮಂಡಲದ ಕಾರ್ಯದರ್ಶಿ ಹರ್ಷಿಣಿ ಪುಷ್ಪಾನಂದ ಸ್ವಾಗತಿಸಿದರು.ರೂಪ ಎಲ್ ಶೆಟ್ಟಿ ಅರಳ ವಂದಿಸಿದರು.
ಇದೇ ವೇಳೆ ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ ಸಲ್ಲಿಸಲಾಯಿತು. ಬಳಿಕ ಆಟಿಯ ತುಳುನಾಡಿನ ವಿಶೇಷ ಖಾದ್ಯಗಳನ್ನು ತಾವೆ ತಯಾರಿಸಿ ತಂದಿದ್ದ ಖಾದ್ಯವನ್ನು ಸಹಬೋಜನದೊಂದಿಗೆ ಸವಿದರು.



