ಬಂಟ್ವಾಳ: ವಿವಿಧ ಪಿಂಚಣಿಗಳಿಗೆ ಬಿ.ಪಿ.ಎಲ್ ಪಡಿತರ ಚೀಟಿಯ ಆದಾಯ ಮಿತಿ 1.20 ಲಕ್ಷ ರೂ.ವರೆಗೆ  ಪರಿಗಣಿಸುವಂತೆ ಸಿದ್ದಕಟ್ಟೆ ಪ್ರಾಥಮಿಕ‌  ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ರಾಜ್ಯ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಮನಿ ಮೂಲಕ ಒತ್ತಾಯಿಸಿದ್ದಾರೆ.


ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಕುಟುಂಬ ವಾರ್ಷಿಕ ಆದಾಯ 1.20 ಲಕ್ಷ ವರೆಗೆ ಮಿತಿಯನ್ನು ವಿಧಿಸಲಾಗಿದ್ದು,  ಆದಾಯದ ಮಿತಿ 1.20 ಲಕ್ಷಕ್ಕಿಂತ ಕಡಿಮೆ ಇರುವ ಆರ್ಹ ಫಲಾನುಭವಿಗಳು ಬಿ.ಪಿ.ಎಲ್ ಪಡಿತರ ಚೀಟಿನ್ನು ಪಡೆದಿರುತ್ತಾರೆ ಎಂದು ಅವರು‌ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಈ ಕುಟುಂಬದಲ್ಲಿನ ಸದಸ್ಯರಿಗೆ  ಅವರವರ ಅಗ್ಯತಕ್ಕೆ ಅನುಗುಣವಾಗಿ ಶಾಲಾ ಪ್ರವೇಶ ಶುಲ್ಕ ವಿನಾಯಿತಿ , ವಿವಿಧ ವಿದ್ಯಾರ್ಥಿ ವೇತನಗಳಿಗೆ ಸಂಬಂಧಿಸಿದಂತೆ  ಹೊಂದಿರುವ ಬಿ.ಪಿ.ಎಲ್ ಪಡಿತರ ಚೀಟಿಯ ಆಧಾರದಲ್ಲಿ 32 ಸಾ.ರೂ.ನಿಂದ 1.20 ಲಕ್ಷ ವರೆಗಿನ ಆದಾಯ ಪ್ರಮಾಣ ಪತ್ರ ಪಡೆದಿರುತ್ತಾರೆ.ಇಂತಹ ಕುಟುಂಬದಲ್ಲಿನ ಸದಸ್ಯರು ವಿಧವಾ, ವೃದ್ದಾಪ್ಯ ವೇತನ , ಸಂಧ್ಯಾ ಸುರಕ್ಷಾ ಯೋಜನೆ , ರಾಷ್ಟ್ರೀಯ ಕುಟುಂಬ ಪರಿಹಾರ ನಿಧಿ ಸೇರಿದಂತೆ ವಿವಿಧ ಸಾಮಾಜಿಕ ಭದ್ರತೆ ಪಿಂಚಣಿಗಳಿಗೆ ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಆದಾಯ ಮಿತಿ  32 ಸಾ. ರೂ.ವಿಗಿಂತ ಅಧಿಕ ಇರುವ ಕಾರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ತಿರಸ್ಕ್ರತಗೊಳಿಸಲಾಗುತ್ತದೆ ಎಂದು ಪ್ರಭು ಮನವಿಯಲ್ಲಿ ವಿವರಿಸಿದ್ದಾರೆ.
ಇದರಿಂದಾಗಿ ಕಳೆದ 2-3 ತಿಂಗಳಿನಿಂದ  ಸಾವಿರಾರುಮಂದಿ ಬಿ.ಪಿ.ಎಲ್ ಪಡಿತರ ಹೊಂದಿದ ಅರ್ಹ ಫಲಾನುಭವಿಗಳು ಸರಕಾರದ ವಿವಿಧ ಪಿಂಚಣಿ ಸೌಲಭ್ಯವನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದು,
ಈ ಹಿನ್ನಲೆಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ಪಡೆಯಲು ಸರಕಾರ ವಿಧಿಸಿದ ಆದಾಯದ ಮಿತಿ 1.20 ಲಕ್ಷವನ್ನು  ಸರಕಾರದ ವಿವಿಧ ಪಿಂಚಣಿ ಸೌಲಭ್ಯಗಳಿಗೂ ಅನ್ವಯಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅವರು ಸಚಿವರನ್ನು ಮನವಿ ಮೂಲಕ ಒತ್ತಾಯಿಸಿದ್ದಾರೆ.

By suddi9

Leave a Reply

Your email address will not be published. Required fields are marked *