ಕ್ಯಾನ್ಸರ್ ಪೀಡಿತ ಬಾಲಕಿಗೆ ನೆರವು
ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ದೈವಸ್ಥಾನ ಸೇವಾ ಸಮಿತಿ ವತಿಯಿಂದ ಕ್ಯಾನ್ಸರ್ ಪೀಡಿತ ಬಾಲಕಿ ಮನಸ್ವಿ ಕರ್ಪೆ ಈಕೆಯ ಚಿಕಿತ್ಸೆಗಾಗಿ ರೂ 25ಸಾವಿರ ಮೊತ್ತದ ಸಹಾಯಧನ ಹಸ್ತಾಂತರಿಸಲಾಯಿತು.

ಸಮಿತಿ ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಹರ್ಷೇಂದ್ರ ಹೆಗ್ಡೆ,ಹರಿಶ್ಚಂದ್ರ ಶೆಟ್ಟಿ, ಪ್ರದೀಪ್ ಕುಮಾರ್, ಶಾಲಿನಿ ಶೆಟ್ಟಿ, ದಾಮೋದರ ಬಂಗೇರ, ಗಂಗಾಧರ ಪಿಲ್ಕಾಜೆ, ಜನಾರ್ದನ ಪಿಲ್ಕಾಜೆ, ರಾಜೇಶ ಪಟ್ರಾಡಿ, ನಾಗರಾಜ ಶೆಟ್ಟಿ ಕರ್ಪೆ , ಬಾಲಕೃಷ್ಣ ಶೆಟ್ಟಿ ಬಗ್ಗಂಬೋಳಿ ಮತ್ತಿತರರು ಇದ್ದರು.



