ಬಂಟ್ವಾಳ : ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಮಾಣಿ-ಬದಿಗುಡ್ಡೆ ಅವರು ಆಯ್ಕೆಯಾಗಿದ್ದಾರೆ.ಇವರುದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿದ್ದು, ಜಿಲ್ಲೆಯ ಹಲವು ದೈವಸ್ಥಾನ ದೇವಸ್ಥಾನಗಳ ಜೀರ್ಣೋದ್ಧಾರ ಸಮಿತಿಯ ಜವಾಬ್ದಾರಿಯನ್ನು ವಹಿಸಿಕೊಂಡು, ಧಾರ್ಮಿಕ, ಸಾಮಾಜಿಕವಾಗಿಯು ಗುರುತಿಸಿಕೊಂಡಿದ್ದಾರೆ.

ಐತಪ್ಪ ಆಳ್ವ ಬಿ.ಸಿ.ರೋಡ್(ಉಪಾಧ್ಯಕ್ಷ),ಸದಾನಂದ ಆಳ್ವ ಕಂಪ(ಕಾರ್ಯದರ್ಶಿ),ಲೋಕೇಶ್ ಶೆಟ್ಟಿ ಕುಳ
(ಕೋಶಾಧಿಕಾರಿ),ಶಿವಪ್ರಸಾದ್ ಶೆಟ್ಟಿ ಸಜಿಪ(ಜತೆ ಕಾರ್ಯದರ್ಶಿ),ಶ್ರೀವಿದ್ಯಾ ರೈ ಬಿ.ಸಿ.ರೋಡು(ಜತೆ ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.ಬ್ರಹ್ಮರಕೊಟ್ಲುವಿನಲ್ಲಿರುವ ಬಂಟ್ವಾಳ ತಾಲೂಕು ಬಂಟರ ಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕಿರಣ್ ಹೆಗ್ಡೆ ಅನಂತಾಡಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ಲೋಕನಾಥ ಶೆಟ್ಟಿ ಬಿ.ಸಿ.ರೋಡ್, ಶಾಂತರಾಮ ಶೆಟ್ಟಿ ಬೋಳಂತೂರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.
