ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ನಿಂದ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಸ್ತಾಂತರ
ಬಂಟ್ವಾಳ:ತಾಲೂಕಿನ ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಸ್ತಾಂತರಿಸಲಾಯಿತು.

ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಅವರು ಸಿದ್ದಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅರ್ಹ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಹಸ್ತಾಂತರಿಸಿ ಮಾತನಾಡಿ,ಪರಸ್ಪರ ಸ್ನೇಹ ಮತ್ತು ಒಡನಾಟಕ್ಕಾಗಿ ಆರಂಭ ಗೊಂಡ ರೋಟರಿ ಕ್ಲಬ್ ಪ್ರಸಕ್ತ ಸಮಾಜಮುಖಿ ಸೇವೆ ಮತ್ತು ಸಮಾನತೆ ಹಾಗೂ ನಾಯಕತ್ವ ದ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
ಸಹಾಯಕ ಗವರ್ನರ್ ಸಿಎ ಉಮೇಶ್ ರಾವ್ ಮಿಜಾರ್ ಮಾತನಾಡಿ, ‘ಜಗತ್ತಿನಲ್ಲಿ ರೋಟರಿ ಸಂಸ್ಥೆಯು 2,800ಕೋಟಿ ರೂ.ಗೂ ಮಿಕ್ಕಿ ಮೊತ್ತದ ಸಮಾಜಮುಖಿ ಚಟುವಟಿಕೆ ಗಳನ್ನು ನಡೆಸುತ್ತಿದೆ ಎಂದರು.
ಕ್ಲಬ್ ಸಲಹೆಗಾರ ಜೆರಾಲ್ಡ್ ಡಿಕೊಸ್ತ, ನಿವೃತ್ತ ಮುಖ್ಯಶಿಕ್ಷಕ ಬಿ. ರಾಮಚಂದ್ರ ರಾವ್ ಮಾತನಾಡಿದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಕ್ಲಬ್ಬಿನ ನೂತನ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ನಿಕಟಪೂರ್ವ ಕಾರ್ಯದರ್ಶಿ ಪದ್ಮನಾಭ ಕೋಟ್ಯಾನ್, ಮಾಜಿ ವಲಯ ಸೇನಾನಿ ಗಣೇಶ್ ಶೆಟ್ಟಿ ಮತ್ತಿತರರು ಇದ್ದರು.
ಕ್ಲಬ್ಬಿನ ನಿಕಟಪೂರ್ವ ಅಧ್ಯಕ್ಷ ಎಸ್. ಎಲ್. ಶಿವಯ್ಯ ಸ್ವಾಗತಿಸಿ,ಕಾರ್ಯದರ್ಶಿ ಟೀನಾ ಡಿಕೊಸ್ತ ವಂದಿಸಿದರು. ಶಿಕ್ಷಕ ರಾಜೇಶ್ ನೆಲ್ಯಾಡಿ ನಿರೂಪಿಸಿದರು.



