ಬಂಟ್ವಾಳ: ವೇದ , ಉಪನಿಸತ್ತು ಮತ್ತು ಪುರಾಣಗಳನ್ನು ಆರಾಧಿಸಿದ ವೇದವ್ಯಾಸರನ್ನು ಮಾನವಗುರು ಎಂದು ಕರೆಯಲಾಗುತ್ತದೆ. ಗುರುಗಳು ಎಂದರೆ ನಮ್ಮನ್ನು ತಿದ್ದಿ ತೀಡಿ ಸರಿಯಾದ ದಾರಿಯನ್ನು ತೋರುವವರಾದರೆ, ನಮ್ಮ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕನ್ನು ನಮ್ಮ ಜೀವನದಲ್ಲಿ ಮೂಡಿಸುವ ಗುರುಗಳು ನಮ್ಮ ಪಾಲಿನ ದೇವರು ಎಂದು ಕರ್ನಾಟಕ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆದ “ಗುರುಪೂರ್ಣಿಮೆ” ಆಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸಗೈದ ಅವರುವೇದವ್ಯಾಸರು ಹುಟ್ಟಿದ ದಿನವನ್ನು ಗುರುಪೂರ್ಣಿಮೆ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

‘ಮನೆಯೇ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು’ ಎಂಬ ಮಾತಿನಂತೆ ತಂದೆ-ತಾಯಿ ಮೊದಲ ಗುರುಗಳು, ಗುರುವೆಂದರೆ ಕೇವಲ ಶಿಕ್ಷಕರಷ್ಟೇ ಅಲ್ಲ ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ ಆಗಿದ್ದು ವಿದ್ಯಾರ್ಥಿಗಳು ಕೂಡ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ” ಬಾಳಬೇಕು ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ರಾಷ್ಟ್ರೀ ಸೇವಿಕಾ ಸಮಿತಿಯ ಸದಸ್ಯೆ ಡಾ| ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ , ಶಾಲೆಯ ಮುಖ್ಯೋಪಾಧ್ಯಾಯರು ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಭಾರತಮಾತೆಗೆ ದೀಪಪ್ರಜ್ವಲನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪೇರಣಾ ಗೀತೆ ಹಾಡಿದರು.
ವಿದ್ಯಾರ್ಥಿಗಳಾದ ಶ್ರೀರಾಮ ಸ್ವಾಗತಿಸಿದರು, ಮನ್ವಿತ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು, ಸಮೃದ್ಧಿ ವಂದಿಸಿದರು.
